🔥 TRENDING कार्तिकी एकादशीवर भाविकांची अलोट गर्दी... राज्यात ३१० तालुके दुष्काळग्रस्त, मग म... J&K Gymnasts Secure Five Medals at Nat... 300 Citizens Benefit from Anywhere Reg... Three suspects, including a woman, arr... Three accused, including a woman, arre...
21 Nov 2026•
ગુજરાતી मराठी ਪੰਜਾਬੀ বাংলা
Religion

ತುಮಕೂರು ನೀರಕಲ್ಲು ಶ್ರೀ ಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

✍️ Reporter: GIRISHA B 🗓 21 Nov 2026, 01:37 PM 👁 46
Share: 💬 WhatsApp 📘 Facebook 𝕏 Post

ತುಮಕೂರಿನ ನೀರಕಲ್ಲು ಶ್ರೀ ಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಭವ್ಯ ದೀಪೋತ್ಸವ ಆಯೋಜನೆಗೊಂಡು, ನೂರಾರು ಭಕ್ತರು ಅರಳಿ ಮರದ ಸುತ್ತ ಮಣ್ಣಿನ ದೀಪಗಳನ್ನು ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದರು.

ತುಮಕೂರಿನ ನೀರಕಲ್ಲು ಶ್ರೀ ಲಕ್ಷ್ಮಿ ದೇವಿ ದೇವಸ್ಥಾನದ ಆವರಣದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಭವ್ಯ ದೀಪೋತ್ಸವ ಆಯೋಜಿಸಲಾಯಿತು.

ಪವಿತ್ರ ಅರಳಿ ಮರದ ಸುತ್ತ ನೂರಾರು ಮಣ್ಣಿನ ದೀಪಗಳನ್ನು ಬೆಳಗಿಸಿ, ಹೂವಿನ ಮಾಲೆ ಹಾಕಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೀಪದ ಬೆಳಕಿನಲ್ಲಿ ದೇವಸ್ಥಾನ ಸ್ವರ್ಗದಂತೆ ಕಂಗೊಳಿಸಿತು.

ಹಳದಿ ಸೇವಂತಿಗೆ, ಬಿಳಿ ಮಲ್ಲಿಗೆ, ಕೇಸರಿ ಹೂವಿನ ಮಾಲೆಗಳಿಂದ ದೇವಿಯನ್ನ ಅಲಂಕರಿಸಲಾಯಿತು. ಬಾಳೆಹಣ್ಣು, ಹೂವು, ಕುಂಕುಮದಿಂದ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.

ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಜೊತೆಗೆ ಜಾತ್ರಾ ಮಹೋತ್ಸವದಲ್ಲಿ ಹೂವಿನ ಬಸವನ ನೃತ್ಯ ಪ್ರದರ್ಶನವೂ ನಡೆಯಿತು, ಯುವಕನು ಬೃಹತ್ ಹೂವಿನ ಛತ್ರಿಯನ್ನು ಹೊತ್ತು ಕುಣಿದು, ಗ್ರಾಮಸ್ಥರು ತಮಟೆ, ಡೋಲು ವಾದ್ಯದ ಸದ್ದಿಗೆ ಕುಣಿದರು.
📲Get App