🔥 ट्रेंडिंग एसीबी ने वॉल्पोई में निलंबित कांस्टेबल... गोवा के जोसेफिन एस्टेट को नई जिंदगी मि... पठानकोट कार लूट मामले में चार गिरफ्तार... दिल्ली डीएमसी सदस्यों की सूची जारी, वि... गांव-गांव तक डिजिटल बैंकिंग का संदेश प... *पांडरानी गांव में लगातार बारिश से किस...
21 नव. 2026•
ગુજરાતી मराठी ਪੰਜਾਬੀ বাংলা

**ಕ್ರೀಡೆ ಆರೋಗ್ಯಕರ ಜೀವನಕ್ಕೆ ಪೂರಕ: ನಿತಿನ್ ವೆಂಕಟೇಶ್* *ಭಾವಚಿತ್ರ ಹಾಕದಿರುವುದಕ್ಕೆ ಮೈಸೂರು ಪೈಂಟ್ಸ್ ಅಧ್ಯಕ್ಷ ಎಚ್.ಡಿ. ಗಣೇಶ್ ಆಕ್ಷೇಪ; ನಿತಿನ್ ವೆಂಕಟೇಶ್ ತಿರುಗೇಟು**

✍️ रिपोर्टर: Vasanthakumar C S 🗓 21 नव. 2026, 08:51 PM 👁 9
शेयर करें: 💬 WhatsApp 📘 Facebook 𝕏 Post

*ಭಾವಚಿತ್ರ ಹಾಕದಿರುವುದಕ್ಕೆ ಮೈಸೂರು ಪೈಂಟ್ಸ್ ಅಧ್ಯಕ್ಷ ಎಚ್.ಡಿ. ಗಣೇಶ್ ಆಕ್ಷೇಪ; ನಿತಿನ್ ವೆಂಕಟೇಶ್ ತಿರುಗೇಟು**

*ಪಿರಿಯಾಪಟ್ಟಣ* : ಕ್ರೀಡೆ ಕೇವಲ ಯುವಜನತೆಗೆ ಸೀಮಿತವಾಗಿಲ್ಲ. ಎಲ್ಲ ವಯೋಮಾನದವರೂ ಆರೋಗ್ಯಕರ ಜೀವನ ನಡೆಸಲು ಕ್ರೀಡೆ ಸಹಕಾರಿಯಾಗಿದೆ ಎಂದು ತಾಲೂಕು ಆಶ್ರಯ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪಿರಿಯಾಪಟ್ಟಣ ತಾಲೂಕು ಶಾಖೆಯ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟ, ವಾರ್ಷಿಕ ಮಹಾಸಭೆ ಹಾಗೂ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ನಡೆಯುವ ವಿವಿಧ ಕ್ರೀಡಾಕೂಟ ಹಾಗೂ ಕ್ರೀಡಾ ಉತ್ಸವಗಳಲ್ಲಿ ಭಾಗವಹಿಸುತ್ತಿರುವ ನನಗೆ ಸರ್ಕಾರಿ ನೌಕರರ ಸಂಘ ಆಯೋಜಿಸಿರುವ ಈ ಕ್ರೀಡಾಕೂಟ ಸಂತಸ ತಂದಿದೆ. ಸರ್ಕಾರಿ ನೌಕರರು ದೈನಂದಿನ ಕರ್ತವ್ಯದ ಒತ್ತಡದ ನಡುವೆಯೂ ಇಂತಹ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಚಟುವಟಿಕೆಗಳು ಅತ್ಯಗತ್ಯ ಎಂದರು.
*ವರ್ಷಕ್ಕೆ ಎರಡು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ:* ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವರ್ಷಕ್ಕೆ ಕನಿಷ್ಠ ಎರಡು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.
*ಮೈಸೂರು ಬಣ್ಣ ಮತ್ತು ಅರಗು ಸಂಸ್ಥೆಯ ಅಧ್ಯಕ್ಷ ಎಚ್.ಡಿ. ಗಣೇಶ್* ಮಾತನಾಡಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಿ ನೌಕರರ ಸಂಘ ಉಚಿತ ಆರೋಗ್ಯ ಶಿಬಿರ ಆಯೋಜಿಸಿರುವುದು ಸ್ವಾಗತಾರ್ಹ. ಸರ್ಕಾರಿ ನೌಕರರು ಪ್ರತಿನಿತ್ಯ ಕರ್ತವ್ಯದ ಒತ್ತಡದ ನಡುವೆಯೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇಂತಹ ಒತ್ತಡದ ಬದುಕಿನ ನಡುವೆ ಕ್ರೀಡೆ ಮತ್ತು ಮನರಂಜನಾ ಚಟುವಟಿಕೆಗಳು ಕೊಂಚ ಉಲ್ಲಾಸ ಹಾಗೂ ಚೈತನ್ಯ ನೀಡುತ್ತವೆ ಎಂದರು.
ಇಂತಹ ಗುಣಮಟ್ಟದ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿಯೂ ಹೆಚ್ಚೆಚ್ಚು ಆಯೋಜಿಸಲು ಸಂಘ ಮುಂದಾಗಬೇಕು.ಅಗತ್ಯ ಬೇಡಿಕೆಗಳನ್ನು ಮುಂದಿಟ್ಟರೆ ವೈಯಕ್ತಿಕವಾಗಿ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
*ಭಾವಚಿತ್ರ ಹಾಕದಿರುವುದಕ್ಕೆ ಗಣೇಶ್ ಆಕ್ಷೇಪ:* ಇಡೀ ದೇಶದಲ್ಲಿ ಚುನಾವಣೆಗೆ ಅಗತ್ಯವಿರುವ ಶಾಯಿ ತಯಾರಿಸುವ ಏಕೈಕ ಸಂಸ್ಥೆ ಮೈಸೂರು ಪೈಂಟ್ಸ್ ಅಂಡ್ ವಾರ್ನಿಶ್ ಸಂಸ್ಥೆಯಾಗಿದೆ. ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಯಾರ ಮನೆಯಿಂದ ನನ್ನನ್ನು ಆಯ್ಕೆ ಮಾಡಿ ಕಳುಹಿಸಿಲ್ಲ. ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ನನ್ನನ್ನು ಆಯ್ಕೆ ಮಾಡಿ ನೇಮಕ ಮಾಡಿದೆ. ಇಂತಹ ಕಾರ್ಯಕ್ರಮದ ಆಹ್ವಾನದಲ್ಲಿ ಶಾಸಕ ಕೆ. ವೆಂಕಟೇಶ್ ಹಾಗೂ ಅವರ ಪುತ್ರ ನಿತಿನ್ ವೆಂಕಟೇಶ್ ಅವರ ಭಾವಚಿತ್ರಗಳನ್ನು ಮಾತ್ರ ಪ್ಲಕ್ಸ್ ಬೋರ್ಡ್ ಹಾಕಿಸಿ ನನ್ನ ಭಾವಚಿತ್ರವನ್ನು ಹಾಕದೆ ಅಗೌರವ ತೋರಿರಿರುವುದು ನಿಜಕ್ಕೂ ಅಸಮಾಧಾನ ತಂದಿದೆ ಎಂದು ವ್ಯಕ್ತಪಡಿಸದಲ್ಲದೆ ಕಾರ್ಯಕ್ರಮ ಆಯೋಜಕರ ವಿರುದ್ಧ ವಾಗ್ದಾಳಿ ನಡೆಸಿದರು.
*ಗಣೇಶ್ ಆರೋಪಕ್ಕೆ ನಿತಿನ್ ತಿರುಗೇಟು* : ಇದಕ್ಕೆ ಪ್ರತಿಕ್ರಿಯಿಸಿದ ನಿತಿನ್ ವೆಂಕಟೇಶ್, ಯಾವುದೇ ಸರ್ಕಾರಿ ನೌಕರರಿಗೂ ಗಣೇಶ್ ಅವರ ಭಾವಚಿತ್ರ ಹಾಕದೆ ಕಾರ್ಯಕ್ರಮ ನಡೆಸುವಂತೆ ನಾವು ಸೂಚನೆ ನೀಡಿಲ್ಲ. ಈ ವಿಚಾರದಲ್ಲಿ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಬಳಿಕ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕ್ಷಮೆಯಾಚಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೊಸಳ್ಳಿ ಕೃಷ್ಣೇಗೌಡ ಮಾತನಾಡಿದರು. ಸಂಘದಲ್ಲಿ ಕಾರ್ಯನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡಿರುವ ಲಕ್ಷ್ಮೀದೇವಿ, ಗಣೇಶ್ ಹಾಗೂ ವಿಶ್ವನಾಥ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಗಣ್ಯರು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ನೌಕರರು ಉಪಸ್ಥಿತರಿದ್ದರು.
📲Get App