🔥 ट्रेंडिंग Manipur Cherry Blossom cum Flower Fest... ગાંધીગ્રામના એસ.કે. ચોક પાસે મનીષ પરમા... ધાંગધ્રા તાલુકા અને શહેર પોલીસ સ્ટેશને... विश्व बैंक टीम ने सिक्किम के ड्जोंगु म... मिज़ोरम के बीजेपी नेताओं ने नितिन नबिन... જૂનાગઢ ક્રાઇમ 브ાન્ચે સાધુ વેશમાં ચોરન...
20 नव. 2026•
ગુજરાતી मराठी ਪੰਜਾਬੀ বাংলা
राजनीति

ಬಸವ ಮಂಟಪ’ ಕೃತಿ ಮುಟ್ಟುಗೋಲು ನಿರ್ಧಾರ ಸ್ವಾಗತ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹ

✍️ रिपोर्टर: Basavaraj pujari 🗓 20 नव. 2026, 10:05 PM 👁 25
शेयर करें: 💬 WhatsApp 📘 Facebook 𝕏 Post

ಬೀದರ್: ಲೇಖಕ ರವಿ ಹಂಜ್ ರಚಿಸಿರುವ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಸದ್ಭಾವನಾ ಮಂಚ್‌ನ ಬೀದರ್ ಜಿಲ್ಲಾ ಘಟಕ ಸ್ವಾಗತಿಸಿದೆ. ಬಸವಣ್ಣನವರು ಸೇರಿದಂತೆ ಯಾವುದೇ ಮ

ಬಸವ ಮಂಟಪ’ ಕೃತಿ ಮುಟ್ಟುಗೋಲು ನಿರ್ಧಾರ ಸ್ವಾಗತ: ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹ

ಬೀದರ್: ಲೇಖಕ ರವಿ ಹಂಜ್ ರಚಿಸಿರುವ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಸದ್ಭಾವನಾ ಮಂಚ್‌ನ ಬೀದರ್ ಜಿಲ್ಲಾ ಘಟಕ ಸ್ವಾಗತಿಸಿದೆ.

ಬಸವಣ್ಣನವರು ಸೇರಿದಂತೆ ಯಾವುದೇ ಮಹಾನ್ ಪುರುಷರನ್ನು ಅವಹೇಳನ ಮಾಡುವುದು ಹಾಗೂ ಅವರ ಚಾರಿತ್ರ್ಯವನ್ನು ತಿರುಚಿ ಬಿಂಬಿಸುವುದು ಖಂಡನೀಯ. ಬಸವಣ್ಣನವರ ವೈಯಕ್ತಿಕ ಬದುಕಿನ ಕುರಿತು ಅವಹೇಳನಕಾರಿ ಅಂಶಗಳನ್ನು ಒಳಗೊಂಡ ಕೃತಿ ರಚಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಿರುವ ಆರೋಪ ಎದುರಿಸುತ್ತಿರುವ ರವಿ ಹಂಜ್ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಚ್‌ನ ಜಿಲ್ಲಾ ಸಂಚಾಲಕ ಗುರುನಾಥ ಗಡ್ಡೆ ಹಾಗೂ ಸಹ ಸಂಚಾಲಕ ಮುಹಮ್ಮದ್ ನಿಜಾಮೊದ್ದೀನ್ ಆಗ್ರಹಿಸಿದ್ದಾರೆ.

ಬಸವಣ್ಣನವರು ಮಹಾನ್ ಮಾನವತಾವಾದಿಯಾಗಿದ್ದು, ಸಕಲ ಜೀವಾತ್ಮರಿಗೂ ಒಳಿತನ್ನೇ ಬಯಸಿದ ಶರಣರಾಗಿದ್ದಾರೆ. ಅಂತಹ ಮಹಾನ್ ವ್ಯಕ್ತಿತ್ವಕ್ಕೆ ‘ಬಸವ ಮಂಟಪ’ ಕೃತಿಯ ಮೂಲಕ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ. ಆಧಾರರಹಿತ ಬರಹಗಳ ಮೂಲಕ ಲಿಂಗಾಯತ ಧರ್ಮ ಹಾಗೂ ಶರಣ ಪರಂಪರೆಗೆ ಅವಮಾನ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಕೃತ್ಯದ ಹಿಂದೆ ಇರುವವರನ್ನೂ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, 12ನೇ ಶತಮಾನದಲ್ಲಿಯೇ ಬಸವಣ್ಣ ಸೇರಿದಂತೆ ಅನೇಕ ಶರಣರು ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಇಂತಹ ನಾಡಿನಲ್ಲಿ ವಿದೇಶದಲ್ಲಿದ್ದುಕೊಂಡು ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿರುವುದು ಖಂಡನೀಯ. ರವಿ ಹಂಜ್ ಅವರನ್ನು ಕೂಡಲೇ ಬಂಧಿಸಿ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
📲Get App