🔥 TRENDING KKR ವೇಗಿ ಪತಿರಾಣನ್ನು ಬಿಡುಗಡೆ, ಕ್ಯಾಮರೂನ್... बिलासपुर में संत शिरोमणि नामदेव जी की... ತಿಲಕ್ ವರ್ಮಾ ನಾಯಕತ್ವದ ಭಾರತ 'ಎ' ತಂಡ ದೋಹಾ... ગિરનાર પરિક્રમાના પ્રવેશદ્વારો ખુલ્યા,... *ਦਾਅਵੇ ਅਤੇ ਇਤਰਾਜ਼ ਦਰਜ ਕਰਵਾਉਣ ਲਈ 22 ਨਵੰ... ಸೈಯದ್ ಮುಷ್ತಾಕ್ ಅಲಿ ಟಿ20ರಲ್ಲಿ ಮನ್ವಂತ್ ಕ...
20 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಸಂಭ್ರಮಇತಿಹಾಸ, ಶೌರ್ಯ, ದೇಶಭಕ್ತಿ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ ಕಾರ್ಯಕ್ರಮ

✍️ Reporter: Khaja Hussain 🗓 20 Nov 2026, 06:50 PM 👁 22
Share: 💬 WhatsApp 📘 Facebook 𝕏 Post
**ದೇವದುರ್ಗ ಬ್ರೇಕಿಂಗ್ ನ್ಯೂಸ್**

# ದೇವದುರ್ಗದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಸಂಭ್ರಮ

### ಇತಿಹಾಸ, ಶೌರ್ಯ, ದೇಶಭಕ್ತಿ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ ಕಾರ್ಯಕ್ರಮ

**ದೇವದುರ್ಗ, ನ. 20:** ದೇವದುರ್ಗ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ದೇವದುರ್ಗದ ಖಾಜಿ ಜಿಲಾನಿ ಅವರು ಫಾತೆಹ್ ಪಠಿಸಿದರು. ಬಳಿಕ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಾನಪ್ಪ ಮೇಸ್ತ್ರಿ ಮಾತನಾಡಿ, ಟಿಪ್ಪು ಸುಲ್ತಾನ್ ಅಪ್ರತಿಮ ಹೋರಾಟಗಾರರಾಗಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರರಾಗಿದ್ದಾರೆ ಎಂದು ಸ್ಮರಿಸಿದರು.

ಬಾಕ್ಸ್

ಜಿಲ್ಲಾ ಎಂಆರ್‌ಎಚ್‌ಎಸ್ ಅಧ್ಯಕ್ಷ ಹನುಮಂತ ಎಚ್. ಮನ್ನಾಪುರಿ ಮಾತನಾಡಿ, ಟಿಪ್ಪು ಸುಲ್ತಾನ್ ತಮ್ಮ ಆಡಳಿತಾವಧಿಯಲ್ಲಿ ಜಾತಿ ಭೇದವಿಲ್ಲದೆ ಹಲವು ಸುಧಾರಣಾ ಕಾರ್ಯಗಳನ್ನು ಕೈಗೊಂಡಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಮಾಡಿದ ಅವರ ಆದರ್ಶಗಳನ್ನು ಸ್ಮರಿಸಬೇಕು ಎಂದು ಹೇಳಿದರು.

ಬಾಕ್ಸ್

ಎ. ರಾಜಶೇಖರ್ ನಾಯಕ ಮಾತನಾಡಿ, ಟಿಪ್ಪು ಸುಲ್ತಾನ್ ಅವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿ, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಾಕ್ಸ್ ನಲ್ಲಿ

ವಿಶ್ವನಾಥ್ ಬಲ್ಲಿದವ್ ಮಾತನಾಡಿ, ಟಿಪ್ಪು ಸುಲ್ತಾನ್ ಅವರ ಇತಿಹಾಸ, ಶೌರ್ಯ, ದೇಶಭಕ್ತಿ ಹಾಗೂ ಆಡಳಿತ ಸುಧಾರಣೆಗಳನ್ನು ಸ್ಮರಿಸಿದರು. ಯುವಜನರು ಇತಿಹಾಸವನ್ನು ತಿಳಿದುಕೊಂಡು ದೇಶದ ಏಕತೆ, ಸೌಹಾರ್ದತೆ ಹಾಗೂ ಸಹಬಾಳ್ವೆಯನ್ನು ಕಾಪಾಡಲು ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದು, ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಂತಪ್ಪ,ಟಿಪ್ಪು ಸುಲ್ತಾನ್ ಸಮಿತಿ ಮುಖಂಡರಾದ ಗನಿಸಾಬ್, ಹುಸೇನ್ ಭಾಷಾ ಗೌರಂಪೇಟೆ, ಖಾಜಿ ಜಿಲಾನ್, ಅಮೀನ್ ಭಾಷಾ, ಅಬ್ದುಲ್ ಅಜೀಜ್ ಸಾಬ್, ಕುಮಾರಿ ಗೌರಿ ಜಿ. ನಾಯಕ, ದಾವುದ್ ಅವಂಟಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ವಿಶ್ವನಾಥ್ ಬಲ್ಲಿದವ್, ರಾಮಲಿಂಗ, ಹನುಮಂತ ಎಚ್. ಮನ್ನಾಪುರಿ, ಅಮೀನ್ ಬಾಷಾ ಗೌರಂಪೇಟೆ, ಅಲ್ಪಸಂಖ್ಯಾತ ಜೆಡಿಎಸ್ ಅಧ್ಯಕ್ಷ ಮಹೇಬೂಬ್, ರಮೇಶ್ ರಾಮನಾಳ, ಬಸವ, ಖಾಜಾ ಸಾಬ್ ಉದ್ದಾರ್, ಮೊಯಿನುದ್ದಿನ್ ಎಲೆಕ್ಟ್ರಿಕಲ್, ಇಮಾಮ್ ಸಾಬ್ ಗೌರಂಪೇಟೆ, ಸಿದ್ದು ಮೊಬೈಲ್ ಶಾಪ್ ಸೇರಿದಂತೆ ಟಿಪ್ಪು ಸುಲ್ತಾನ್ ಸಂಘಟನೆಯ ಪದಾಧಿಕಾರಿಗಳು, ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App