🔥 TRENDING कालिमेला में वन विभाग की बड़ी कार्रवाई... બાબરા, અમરેલી રોડ પર કુંભારની દુકાનમાં... ಹಟ್ಟಿ ಚಿನ್ನದಗಣಿಯಲ್ಲಿ ಫುಟ್ಬಾಲ್ ಪಂದ್ಯಾವಳ... ಬಸವ ಮಂಟಪ’ ಕೃತಿ ಮುಟ್ಟುಗೋಲು ನಿರ್ಧಾರ ಸ್ವಾ... PM Modi to Inaugurate Neetish Setu in... Knife Attack on Police Officer in Jaba...
20 Nov 2026•
ગુજરાતી मराठी ਪੰਜਾਬੀ বাংলা
Religion

ಬಸವಣ್ಣನವರ ಅವಹೇಳನ: ತೀವ್ರ ಖಂಡನೆ

✍️ Reporter: Basavaraj pujari 🗓 20 Nov 2026, 09:28 PM 👁 22
Share: 💬 WhatsApp 📘 Facebook 𝕏 Post

ಬೀದರ್: ಲೇಖಕ ರವಿ ಹಂಜ್ ಅವರು ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣನವರ ಅವಹೇಳನ ಮಾಡಿರುವುದನ್ನು ಸಾಹಿತಿ ಹಾಗೂ ಸಮಾಜ ಸೇವಕಿ ವಿಜಯಲಕ್ಷ್ಮಿ ಕೌಟಗೆ ತೀವ್ರವಾಗಿ ಖಂಡಿಸಿದ್ದಾರೆ. ರವಿ ಹಂಜ್ ಬಸವ ಮಂಟಪ ಕೃತಿಯ ಮೂಲಕ ಬಸವಣ

ಬಸವಣ್ಣನವರ ಅವಹೇಳನ: ತೀವ್ರ ಖಂಡನೆ

ಬೀದರ್: ಲೇಖಕ ರವಿ ಹಂಜ್ ಅವರು ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣನವರ ಅವಹೇಳನ ಮಾಡಿರುವುದನ್ನು ಸಾಹಿತಿ ಹಾಗೂ ಸಮಾಜ ಸೇವಕಿ ವಿಜಯಲಕ್ಷ್ಮಿ ಕೌಟಗೆ ತೀವ್ರವಾಗಿ ಖಂಡಿಸಿದ್ದಾರೆ.
ರವಿ ಹಂಜ್ ಬಸವ ಮಂಟಪ ಕೃತಿಯ ಮೂಲಕ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ. ಕೋಟ್ಯಂತರ ಬಸವ ಭಕ್ತರ ಮನಸ್ಸಿಗೆ ನೋವು ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬಸವಣ್ಣ ಶ್ರೇಷ್ಠ ದಾರ್ಶನಿಕರು. ಲಿಂಗಾಯತ ಧರ್ಮದ ಸ್ಥಾಪಕರು. ಅನುಭವ ಮಂಟಪದ ಮೂಲಕ ಜಗತ್ತಿಗೆ ಸಂಸತ್ತಿನ ಪರಿಕಲ್ಪನೆ ನೀಡಿದವರು. 12ನೇ ಶತಮಾನದಲ್ಲೇ ಜಾತಿ, ವರ್ಗ, ವರ್ಣ ರಹಿತ, ಧರ್ಮ ಸಹಿತ ಕಲ್ಯಾಣ ರಾಜ್ಯ ಕಟ್ಟಿ ತೋರಿದ್ದರು ಎಂದು ತಿಳಿಸಿದ್ದಾರೆ.
ಬಸವಣ್ಣನವರ ತತ್ವಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಅಂತೆಯೇ ರಾಜ್ಯ ಸರ್ಕಾರ ಅವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕರನ್ನಾಗಿ ಮಾಡಿ ಗೌರವಿಸಿದೆ. ರವಿ ಹಂಜ್ ಅವರ ಹೇಳಿಕೆ ಹಾಗೂ ಕೃತಿಯನ್ನು ಬಸವಾನುಯಾಯಿಗಳು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.
ಬಸವ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಕಾರಣಕ್ಕಾಗಿ ರವಿ ಹಂಜ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
📲Get App