🔥 TRENDING Thieves steal Rs 1.25 crore of jewelle... Balaghat Air Hostess Murder Case: Vide... ଭୁବନେଶ୍ୱରରେ ଆଗାମୀ ୩ ଘଣ୍ଟାରେ ବର୍ଷା ଏବଂ... West Bengal Board Announces HS 3rd Sem... পিয়ালি রাশ ও গ্রামীন মেলা প্রশাসনিক স... Severe Cyclonic Storm Akvan Nears Indi...
20 Nov 2026•
ગુજરાતી मराठी ਪੰਜਾਬੀ বাংলা
Local

ಬೀದರ ಜಿಲ್ಲೆ ಪೊಲೀಸ್ ನಡೆಸಿದ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ: ಕಬ್ಬಿನ ಕಾರ್ಖಾನೆಗಳಿಗೆ ಸಾಗಿಸುವ ವಾಹನಗಳಿಗೆ ರೆಡಿಯಂ ಸ್ಟಿಕ್ಕರ್ ಅಳವಡಿಸುವಂತೆ ಸೂಚನೆ

✍️ Reporter: Basavaraj pujari 🗓 19 Nov 2026, 02:54 PM 👁 33
Share: 💬 WhatsApp 📘 Facebook 𝕏 Post

ಬೀದರ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಬೇಮಳಖೇಡಾ ಪೊಲೀಸ್ ಠಾಣೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಸಿ, ಕಬ್ಬಿನ ಕಾರ್ಖಾನೆಗಳಿಗೆ ಸಾಗಿಸುವ ಟ್ರ್ಯಾಕ್ಟರ್ ಮತ್ತು ಲಾರಿ ಚಾಲಕರಿಗೆ ವಾಹನಗಳ ಹಿಂದೆ ರೆಡಿಯಂ ಸ್ಟಿಕ್ಕರ್ ಅಳವಡಿಸುವಂತೆ, ದ್ವಿಚಕ್ರ ವಾಹನಗಳಿಗೆ ಹೆಲ್ಮೆಟ್ ಧರಿಸುವಂತೆ, ಕಾರ್ ಚಾಲಕರಿಗೆ ಸೀಟ್ ಬೆಲ್ಟ್ ಧರಿಸುವಂತೆ ಸೂಚಿಸಿದರು.

ಬೀದರ ಜಿಲ್ಲೆ ಪೊಲೀಸ್ ಅಧಿಕಾರಿಗಳು ಬೇಮಳಖೇಡಾ ಪೊಲೀಸ್ ಠಾಣೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಸಿದರು. IPS ಅಧಿಕಾರಿ ಶ್ರೀ ಪ್ರದೀಪ್ ಗುಂಟಿ, ಪೊಲೀಸ್ ವರೀಷ್ಠಾಧಿಕಾರಿಗಳ ನಿರ್ದೇಶನದಂತೆ, ಪಿ.ಎಸ್.ಐ ಶ್ರೀಮತಿ ಸವೀತಾಪ್ರಿಯಂಕಾ ಅವರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಇರುವ ಕಬ್ಬಿನ ಕಾರ್ಖಾನೆಗಳಿಗೆ ಕಬ್ಬಿನ್ನು ಸಾಗಿಸುವ ಟ್ರ್ಯಾಕ್ಟರ್ ಮತ್ತು ಲಾರಿ ಚಾಲಕರಿಗೆ ರಾತ್ರಿಯ ಸಮಯದಲ್ಲಿ ಹಿಂದಿನಿಂದ ಸಂಚರಿಸುವ ವಾಹನದ ಚಾಲಕರಿಗೆ ಕಾಣುವಂತೆ ತಮ್ಮ ವಾಹನಗಳ ಹಿಂದೆ ರೆಡಿಯಂ ಸ್ಟಿಕ್ಕರ್ ಅಳವಡಿಸುವಂತೆ ತಿಳಿಸಿದರು. ಜೊತೆಗೆ, ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಧರಿಸುವಂತೆ ಮತ್ತು ಕಾರ್ ಚಾಲಕರಿಗೆ ಸೀಟ್ ಬೆಲ್ಟ್ ಧರಿಸುವಂತೆ ಸೂಚಿಸಿ ಸಂಚಾರಿ ನಿಯಮಗಳ ಮತ್ತು ಸಂಚಾರಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿದರು.

ಜಿಲ್ಲೆಯಲ್ಲಿ ಅಪಘಾತದ ಪ್ರಮಾಣ ಇಳಿಸುವ ನಿಟ್ಟಿನಲ್ಲಿ ಬೀದರ ಜಿಲ್ಲಾ ಪೊಲೀಸರು ಸದಾ ಪ್ರಯತ್ನಿಸುತ್ತಿದ್ದು, ಈ ಪ್ರಯತ್ನವು ಪ್ರಶಂಸನೀಯವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು, ಚಾಲಕರು ಸಹಕರಿಸಲು ಕೋರಲಾಗಿದೆ.

ಪ್ರದೀಪ್ ಗುಂಟಿ, IPS, ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ.
📲Get App