🔥 TRENDING રાજકોટમાં ખાનગી થિયેટરે દારૂ સાથે બર્થ... 3 सूत्री मांगों को लेकर पटवारी हड़ताल... गोरखपुर में बुलडोजर टक्कर से मरे 14 वर... चंद्रपूरमध्ये पोलीस अधीक्षक आयुष नोपान... Jammu & Kashmir Forecasts Lower Peak P... J&K High Court Transfers 84 Judicial O...
19 Nov 2026•
ગુજરાતી मराठी ਪੰਜਾਬੀ বাংলা

ಕೆ. ಬೇವಿನಹಳ್ಳಿಯಲ್ಲಿ ‘ಊರ ಜನರ ನಡಿಗೆ – ಮಕ್ಕಳ ಕಲಿಕೆಯ ಕಡೆಗೆ’ ಗಣಿತ ಚಟುವಟಿಕೆ ಕಾರ್ಯಕ್ರಮ

✍️ Reporter: Viswanatha D R 🗓 19 Nov 2026, 01:12 PM 👁 68
Watch on: 📘 Facebook
Share: 💬 WhatsApp 📘 Facebook 𝕏 Post
ಹರಿಹರ, ನವೆಂಬರ್ 19: ಹರಿಹರ ತಾಲ್ಲೂಕಿನ ಕೆ. ಬೇವಿನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಫೌಂಡೇಶನ್ ಮತ್ತು ಸ್ಥಳೀಯ ಸಮುದಾಯದ ಸಹಯೋಗದಲ್ಲಿ ‘ಊರ ಜನರ ನಡಿಗೆ – ಮಕ್ಕಳ ಕಲಿಕೆಯ ಕಡೆಗೆ’ ಎಂಬ ಸಮುದಾಯ ಸಹಭಾಗಿತ್ವದ ಗಣಿತ ಚಟುವಟಿಕೆ ಕಾರ್ಯಕ್ರಮ ನಡೆಯಿತು.
ಮಕ್ಕಳಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸುವುದು, ಕಲಿಕೆಯನ್ನು ಸರಳ ಮತ್ತು ಆಸಕ್ತಿದಾಯಕವಾಗಿಸುವುದು ಹಾಗೂ ಪೋಷಕರಲ್ಲಿ ಶೈಕ್ಷಣಿಕ ಜಾಗೃತಿ ತರುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಇದಕ್ಕಾಗಿ ವಿವಿಧ ಗಣಿತ ಚಟುವಟಿಕೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗ್ರಾಮದ ಯುವತಿಯರು, ಮಹಿಳೆಯರು, ಪೋಷಕರು ಸೇರಿ ಸುಮಾರು 53 ಜನರು ಉತ್ಸಾಹದಿಂದ ಭಾಗವಹಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಮಲ್ಲಮ್ಮ ಮಾತನಾಡಿ, ಮಹಿಳಾ ಸಬಲೀಕರಣ ಮತ್ತು ಸ್ತ್ರೀಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಮಹಿಳೆಯರು ಮತ್ತು ಯುವತಿಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಕ್ಕಳ ಕಲಿಕೆಯ ಜವಾಬ್ದಾರಿಯಲ್ಲಿ ಗ್ರಾಮದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ ಅಕ್ಷರ ಫೌಂಡೇಶನ್ ಜಿಲ್ಲಾ ಸಂಯೋಜಕ ರಘು, ಗಣಿತ ಕಲಿಕೆಯನ್ನು ಆಟ, ಚಟುವಟಿಕೆ ಮತ್ತು ದೈನಂದಿನ ಜೀವನದ ಅನುಭವಗಳೊಂದಿಗೆ ಸಂಯೋಜಿಸಿದರೆ ಮಕ್ಕಳ ಅರಿವು ಹೆಚ್ಚಾಗುತ್ತದೆ ಎಂದರು. ಪೋಷಕರು ಮತ್ತು ಸಮುದಾಯದ ಸದಸ್ಯರು ಮಕ್ಕಳ ಕಲಿಕೆಗೆ ನಿರಂತರ ಪ್ರೇರಣೆ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಎಲ್ಲರಿಗೂ ಅಭಿನಂದನಾ ಪ್ರಮಾಣಪತ್ರ ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶಾಲಾ ಶಿಕ್ಷಕರಾದ ಮಂಗಳಾ, ಕೆ. ಎಸ್, ಇಂದ್ರಮ್ಮ,ಕರಿಬಸಪ್ಪ, ಎ. ವಿ.ದೀಪಾ. ಸಿ,ಅಮಿತ್,
ಶಾಲೆಯ ಎಸ್‌ಡಿಎಂಸಿ ಸದಸ್ಯರಾದ ಪಿ. ಟಿ. ಮಮತಾ, ಸೌಮ್ಯ. ಜಿ. ಸಿ. ರೂಪ, ಮಮತಾ, ಎನ್.ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳೆಯರು, ಯುವತಿಯರು, ಶಿಕ್ಷಕರು, ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
📲Get App