🔥 TRENDING West Bengal Board Announces HS 3rd Sem... পিয়ালি রাশ ও গ্রামীন মেলা প্রশাসনিক স... Severe Cyclonic Storm Akvan Nears Indi... Tejashwi Yadav Slams Bihar Government... Bihar Law Department Opens 2026 Recrui... Bihar Launches New Police Data Centre,...
20 Nov 2026•
ગુજરાતી मराठी ਪੰਜਾਬੀ বাংলা

ಆರೋಗ್ಯಕ್ಕಾಗಿ ಒಂದು ಗ್ರಾಮ ಭಾರತ: ಯುವಕರ ಆರೋಗ್ಯಕ್ಕೆ ವಕೀಲರ ಕುಟುಂಬದ ವಿನೂತನ ಸೇವೆ

✍️ Reporter: Khaja Hussain 🗓 18 Nov 2026, 01:11 PM 👁 44
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಆರೋಗ್ಯಕ್ಕಾಗಿ ಒಂದು ಗ್ರಾಮ ಭಾರತ: ಯುವಕರ ಆರೋಗ್ಯಕ್ಕೆ ವಕೀಲರ ಕುಟುಂಬದ ವಿನೂತನ ಸೇವೆ

### ವಾಯು ವಿಹಾರಿಗಳಿಗಾಗಿ ನೈಸರ್ಗಿಕ ಪೌಷ್ಟಿಕ ಆಹಾರ, ಜ್ಯೂಸ್ ಹಾಗೂ ಮೊಳಕೆ ಕಾಳುಗಳ ವಿತರಣೆ; ದುಷ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಲು ಕರೆ

**ಜಾಲಹಳ್ಳಿ:** ಇಂದಿನ ದಿನಗಳಲ್ಲಿ ಯುವಜನರು ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಲಹಳ್ಳಿ ಪಟ್ಟಣದ ಹಿರಿಯ ವಕೀಲ ರಾಘವೇಂದ್ರ ಕೊಲ್ಕಾರ ಅವರು ಹಲವು ವರ್ಷಗಳಿಂದ ಉಪನ್ಯಾಸ, ಕ್ರೀಡಾ ಚಟುವಟಿಕೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ.

ಜಾಲಹಳ್ಳಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳುವವರ ಸಂಖ್ಯೆ ಕಡಿಮೆಯಿದ್ದು, ಅದರಲ್ಲೂ ಯುವಕರ ಪಾಲ್ಗೊಳ್ಳುವಿಕೆ ವಿರಳವಾಗಿದೆ. ಚಳಿಯ ವಾತಾವರಣದಲ್ಲಿಯೂ ಬೆರಳೆಣಿಕೆಯ ಜನರು ಮಾತ್ರ ನಿತ್ಯ ವಾಯು ವಿಹಾರ ಮಾಡುತ್ತಿದ್ದಾರೆ. ಕೆಲ ಯುವಕರು ಜಿಮ್, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ, ಬಹುತೇಕ ಯುವಕರು ದುಷ್ಚಟಗಳತ್ತ ಆಕರ್ಷಿತರಾಗುತ್ತಿರುವುದು ಕಂಡುಬರುತ್ತಿದೆ.

ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಮದ್ಯದ ಅಂಗಡಿಗಳು ಯುವಕರನ್ನು ಆಕರ್ಷಿಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯಕರ ಜೀವನಶೈಲಿಯತ್ತ ಯುವಕರನ್ನು ಪ್ರೇರೇಪಿಸುವ ಅಗತ್ಯವಿದೆ ಎಂಬ ಆಶಯದೊಂದಿಗೆ ರಾಘವೇಂದ್ರ ಕೊಲ್ಕಾರ ಅವರು **‘ಆರೋಗ್ಯಕ್ಕಾಗಿ ಒಂದು ಗ್ರಾಮ ಭಾರತ’** ಎಂಬ ಪರಿಕಲ್ಪನೆಯಡಿ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.

ಅವರ ಮಗ, ಜೂನಿಯರ್ ವಕೀಲ ನಯನ ಕೊಲ್ಕಾರ ಅವರು ತಮ್ಮ ವೃತ್ತಿಯ ಜೊತೆಗೆ ಪ್ರತಿದಿನ ಬೆಳಗಿನ ವಾಯು ವಿಹಾರಕ್ಕೆ ಬರುವವರಿಗೆ ವಿವಿಧ ನೈಸರ್ಗಿಕ ಪೌಷ್ಟಿಕ ಆಹಾರಗಳನ್ನು ಸಿದ್ಧಪಡಿಸಿ ನೀಡುತ್ತಿದ್ದಾರೆ. ಆಮ್ಲಾ (ನೆಲ್ಲಿಕಾಯಿ) ಜ್ಯೂಸ್, ಕ್ಯಾರೆಟ್, ಬೀಟ್‌ರೂಟ್, ಅಂಜೂರದ ಮಿಲ್ಕ್‌ಶೇಕ್, ವಿವಿಧ ಬಗೆಯ ಮೊಳಕೆ ಕಾಳುಗಳು, ಮೊಟ್ಟೆ, ಎಳ್ಳು ಉಂಡೆ, ಶೇಂಗಾ ಉಂಡೆ ಸೇರಿದಂತೆ ರಾಸಾಯನಿಕ ಬಳಕೆಯಿಲ್ಲದ ಅಕ್ಕಿ, ಚಕ್ಕಿ ಹಾಗೂ ಮಸಾಲೆ ಪದಾರ್ಥಗಳನ್ನು ಒಳಗೊಂಡ ಆಹಾರವನ್ನು ವಾರದ ಆರು ದಿನ ವಿತರಿಸುತ್ತಿದ್ದಾರೆ.

ವಾಯು ವಿಹಾರ ಮುಗಿಸಿಕೊಂಡು ಬರುವಷ್ಟರಲ್ಲಿ ವಿವಿಧ ಪೌಷ್ಟಿಕ ಆಹಾರ ಮತ್ತು ಜ್ಯೂಸ್‌ಗಳನ್ನು ಸಿದ್ಧಪಡಿಸಿ ನೀಡುವ ನಯನ ಅವರ ಕಾರ್ಯಕ್ಕೆ ವಾಯು ವಿಹಾರಿಗಳಾದ ಸಿದ್ದು ನಾಯಕ, ಅಬ್ರಹಾಂ ಕಮ್ಮಲದಿನ್ನಿ, ಮಲ್ಲಯ್ಯ ಗೌಡೂರು, ಸಿದ್ದು, ಶರಣು, ಹೆಸರೂರು ಗೊಲ್ಲಾಳಪ್ಪ, ಸೌದ್ರಿ ಶಬ್ಬೀರ್ ಜಾಲಹಳ್ಳಿ, ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಂದೆಯ ಮಾರ್ಗದರ್ಶನದಲ್ಲಿ ಮಗ ನಯನ ಅವರು ತಮ್ಮ ವೃತ್ತಿಯ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ, ಯುವಕರು ದುಷ್ಚಟಗಳಿಂದ ದೂರವಾಗಿ ಆರೋಗ್ಯಕರ ವಾತಾವರಣಕ್ಕೆ ಹೊಂದಿಕೊಳ್ಳಲಿ ಎಂದು ಜಾಲಹಳ್ಳಿ ಸಮುದಾಯ ಕೇಂದ್ರದ ಆರೋಗ್ಯ ಅಧಿಕಾರಿ ಆರ್.ಎಸ್. ಹುಲಿಮನಿ ಹರ್ಷ ವ್ಯಕ್ತಪಡಿಸಿದ್ದಾರೆ.

**ವರದಿ: ಖಾಜಾ ಹುಸೇನ್ ಬಾಬಾ , ಜಾಲಹಳ್ಳಿ**
📲Get App