🔥 TRENDING Jharkhand Government Publishes List of... Jharkhand ambulance services suspended... Virender Sehwag Supports MS Dhoni’s Re... Pakistani Man Disguises as Woman in Au... Manorama News airs Speed News at 9:30 ... Chandrapur Police Bust 54 Organized Cr...
20 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈರಣ್ಣ ರುದ್ರಾಕ್ಷಿ ಅವರಿಗೆ ಆತ್ಮೀಯ ಸನ್ಮಾನ - ಶಾಂತಿನಗರದ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಗಣ್ಯರು, ಮುಖಂಡರಿಂದ ಶಾಲು ಹೊದಿಸಿ, ಹಾರ ಹಾಕಿ ಗೌರವ - ನಗರದ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದ ಸಾಧನೆಗೆ ಶ್ಲಾಘನೆ

✍️ Reporter: Ningappa 🗓 17 Nov 2026, 01:42 PM 👁 33
Share: 💬 WhatsApp 📘 Facebook 𝕏 Post

ದೇವದುರ್ಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈರಣ್ಣ ರುದ್ರಾಕ್ಷಿ ಅವರಿಗೆ ಆತ್ಮೀಯ ಸನ್ಮಾನ - ಶಾಂತಿನಗರದ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಗಣ್ಯರು, ಮುಖಂಡರಿಂದ ಶಾಲು ಹೊದಿಸಿ, ಹಾರ ಹಾಕಿ ಗೌರವ - ನಗರದ ಕೀರ್ತಿ ರಾಜ್ಯಮಟ್ಟಕ್ಕೆ ಕೊಂಡೊಯ್ದ ಸಾಧನೆಗೆ ಶ್ಲಾಘನೆ

ದೇವದುರ್ಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಈರಣ್ಣ ರುದ್ರಾಕ್ಷಿ ಅವರಿಗೆ ಆತ್ಮೀಯ ಸನ್ಮಾನ

ರಾಯಚೂರು: ದೇವದುರ್ಗ ಪಟ್ಟಣದ ವಾರ್ಡ್ ನಂಬರ್ 4 ರ ಶಾಂತಿನಗರದ ಮಾಳಗಡ್ಡಿ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಇಂದು ನವೆಂಬರ್ 17 ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಈರಣ್ಣ ರುದ್ರಾಕ್ಷಿ ಅವರನ್ನು ಗಣ್ಯರು ಹಾಗೂ ಸ್ಥಳೀಯ ಮುಖಂಡರು ಶಾಲು ಹೊದಿಸಿ, ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ನಗರದ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದ ಸಾಧಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಸರಳ ಹಾಗೂ ಅರ್ಥಪೂರ್ಣ ಸಮಾರಂಭದಲ್ಲಿ, ಮುಖಂಡರು ಈರಣ್ಣ ರುದ್ರಾಕ್ಷಿ ಅವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.

ಈ ಸನ್ಮಾನ ಸಂದರ್ಭದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಜಿ. ಬಸವರಾಜ ನಾಯಕ್, ಹಾಲಿ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಸೋಂಕಾರ್, ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಚ್ ಶಿವರಾಜ್ ಸರ್ ಮತ್ತು ಬಿಎಸ್‌ಪಿ ಜಿಲ್ಲಾ ಮುಖಂಡರಾದ ಶಿವಪ್ಪ ಬಲಿದವ ಹಾಗೂ ಪ್ರಭು ಕಾಕರಗಲ್ಲು, ರೈತ ಮುಖಂಡರಾದ ಡೆಂಗಿ ಹನುಮಂತರಾಯ ಮತ್ತು ಪ್ರಗತಿಪರ ಮುಖಂಡರಾದ ಶಿವು ಚಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
📲Get App