🔥 ट्रेंडिंग नितेश तिवारी की 'रामायण' ने 15 दिनों म... हरियाणा ने चौथे विस्तार के बाद अंतिम S... एसएआई से फरार हुए हरियाणा एथलीट का पता... सीबीआई ने हरियाणा जीएसटी अधिकारी को 10... प्रो हॉकी लीग 2026 आज शुरू, 10 टीमों क... पंजाब नेशनल बैंक के शेयरों ने नई 52‑सप...
20 नव. 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ರೈತರ ನೀರಿಗಾಗಿ ಹೋರಾಟಕ್ಕೆ ಸಂದ ಜಯ - ಮರ್ಲಿಂಗ ನಾಯಕ ಅವರ ಹೋರಾಟದ ಫಲವಾಗಿ ನೀರು ಬಿಡುಗಡೆಗೆ ಅಧಿಕಾರಿಗಳ ಒಪ್ಪಿಗೆ - ಶಾಸಕಿ ಕರಿಯಮ್ಮ ನಾಯಕ್ ಅವರ ಹೋರಾಟಕ್ಕೂ ಬೆಂಬಲ - ಮರ್ಲಿಂಗ ನಾಯಕನಂತ ಹೋರಾಟಗಾರರು ತಾಲೂಕಿಗೆ ಬೇಕು, ಅವರ ಹೋರಾಟಕ್ಕೆ ಬೆಂಬಲ ಕೊಡೋಣ ಎಂದು ರೈತ ಮುಖಂಡರ ಕರೆ

✍️ रिपोर्टर: Ningappa 🗓 17 नव. 2026, 12:37 PM 👁 47
शेयर करें: 💬 WhatsApp 📘 Facebook 𝕏 Post

ದೇವದುರ್ಗದಲ್ಲಿ ರೈತರ ನೀರಿಗಾಗಿ ಹೋರಾಟಕ್ಕೆ ಸಂದ ಜಯ - ಮರ್ಲಿಂಗ ನಾಯಕ ಅವರ ಹೋರಾಟದ ಫಲವಾಗಿ ನೀರು ಬಿಡುಗಡೆಗೆ ಅಧಿಕಾರಿಗಳ ಒಪ್ಪಿಗೆ - ಶಾಸಕಿ ಕರಿಯಮ್ಮ ನಾಯಕ್ ಅವರ ಹೋರಾಟಕ್ಕೂ ಬೆಂಬಲ - ಮರ್ಲಿಂಗ ನಾಯಕನಂತ ಹೋರಾಟಗಾರರು ತಾಲೂಕಿಗೆ ಬೇಕು ಎಂದು ರೈತ ಮುಖಂಡರ ಕರೆ

ದೇವದುರ್ಗದಲ್ಲಿ ರೈತರ ನೀರಿಗಾಗಿ ಹೋರಾಟಕ್ಕೆ ಸಂದ ಜಯ - ಮರಿಲಿಂಗ ನಾಯಕ ಅವರ ಹೋರಾಟಕ್ಕೆ ಯಲ್ಲಪ್ಪ ಆಲ್ದರ್ತಿ ಅಭಿನಂದನೆ

ದೇವದುರ್ಗ: ರೈತ ಬಾಂಧವರಲ್ಲಿ ಎಲ್ಲರಿಗೂ ಕೈ ಮುಗಿದು ಮನವಿ ಮಾಡಿಕೊಳ್ಳುವುದು ಏನೆಂದರೆ, ನಿನ್ನೆ ದಿ.16ರಂದು ನಮ್ಮ ನೆಚ್ಚಿನ ಶಾಸಕರಾದ ಕರಿಯಮ್ಮ ಜಿ. ನಾಯಕ್ ಅವರು ರೈತರ ಪರವಾಗಿ ಹೋರಾಟವನ್ನು ಹಮ್ಮಿಕೊಂಡಿದ್ದರು ಎಂದು ಮುಖಂಡ ಯಲ್ಲಪ್ಪ ಆಲ್ದರ್ತಿ ತಿಳಿಸಿದರು.

ಇದಕ್ಕಿಂತ ಮುಂಚಿತವಾಗಿ ನಮ್ಮ ಮರ್ಲಿಂಗ ನಾಯಕ ಅವರು ಹೋರಾಟವನ್ನು ಹಮ್ಮಿಕೊಂಡಿದ್ದರು. ಮರ್ಲಿಂಗ ನಾಯಕ ಅವರ ಹೋರಾಟದ ಫಲವಾಗಿ ಇವತ್ತು ಅಧಿಕಾರಿಗಳು ನಾವೇನು ನೀರು ಬಿಡ್ತೀವಿ, ನೀವು ಯಾವುದೇ ಹೋರಾಟ ಮಾಡಬಾರದು ಎಂದು ಸ್ಪಂದನೆ ನೀಡಿದ್ದಾರೆ ಎಂದು ಹೇಳಿದರು.

ಮರ್ಲಿಂಗ ನಾಯಕ ಅವರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನಿಮ್ಮಂತಹ ಹೋರಾಟಗಾರರು ಇರಬೇಕು ದೇವದುರ್ಗ ತಾಲೂಕಿನಲ್ಲಿ. ದೇವದುರ್ಗ ತಾಲೂಕಿನಲ್ಲಿ ರೈತರ ಹೋರಾಟಕ್ಕೆ ನೆಚ್ಚಿನ ನಾಯಕ ಅಂದ್ರೆ ಮರ್ಲಿಂಗ ನಾಯಕ ಎಂದು ಮತ್ತೊಂದು ಸಲ ಹೇಳುತ್ತೇವೆ ಎಂದು ತಿಳಿಸಿದರು.

ಮರ್ಲಿಂಗ ನಾಯಕನ ಪರವಾಗಿ ದೇವದುರ್ಗ ತಾಲೂಕಿಗೆ ನೀರು ಬಿಡಿಸುವಂತೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ಹಾಗೆ ಮರ್ಲಿಂಗ ನಾಯಕನ ಒಂದು ಹೋರಾಟಕ್ಕೆ ಎಲ್ಲರೂ ನಾವು ಬೆಂಬಲ ಕೊಡೋಣ. ಯಾವುದೇ ಕಾರಣಕ್ಕೂ ಮರ್ಲಿಂಗ ನಾಯಕನಂತ ನಾಯಕರು ಸಿಗುವುದಿಲ್ಲ ಎಂದು ಹೇಳಿದರು.

ತಮಗೆ ಗೊತ್ತಿದ್ದ ಹಾಗೆ ಎಷ್ಟೋ ಗೊಬ್ಬರ ಅಂಗಡಿಗಳಲ್ಲಿ ಏನು ಅವ್ಯವಹಾರ ನಡೀತು, ಅದನ್ನ ಖಂಡಿಸಿ ರೈತರಿಗೆ ನ್ಯಾಯ ಕೊಡಿಸಿ ಆ ಅಂಗಡಿಗಳನ್ನು ಸೀಜ್ ಮಾಡುವಂತ ಕೆಲಸ ಮರ್ಲಿಂಗ ನಾಯಕ ಮಾಡಿದ್ದಾರೆ. ಮರ್ಲಿಂಗ ನಾಯಕನಂತ ಹೋರಾಟಗಾರರು ಹುಟ್ಟೋದಿಲ್ಲ ಎಂದು ಹೇಳಿದರು.
📲Get App