🔥 TRENDING मुख्यमंत्री डॉ. मोहन यादव का रीवा हवाई... ગેનીબેન ઠાકોરના જન્મદિવસ પર કોંગ્રેસની... प्रधानमंत्री मोदी के राजापाकर कार्यक्र... સાવધાન રાજકોટ 🏛️ ગ્રામ વિકાસની દિશામાં વધુ એક સુવિધા... ਪੰਜਾਬ ਦੇ ਕੈਬਿਨੇਟ ਮੰਤਰੀ ਮਹਿੰਦਰ ਭਗਤ ਨੇ ਜ...
19 Nov 2026•
ગુજરાતી मराठी ਪੰਜਾਬੀ বাংলা

ನೀರಿಗಾಗಿ ಬೃಹತ್ ರೈತರ ಪಾದಯಾತ್ರೆ - ನಾರಾಯಣಪುರ ಡ್ಯಾಮ್ ಚಲೋ - ಜಾಲಹಳ್ಳಿಯಲ್ಲಿ ಅದ್ದೂರಿ ಸ್ವಾಗತ

✍️ Reporter: Ningappa 🗓 17 Nov 2026, 01:01 PM 👁 45
Share: 💬 WhatsApp 📘 Facebook 𝕏 Post
ನೀರಿಗಾಗಿ ಬೃಹತ್ ರೈತರ ಪಾದಯಾತ್ರೆ ಜಾಲಹಳ್ಳಿಯಲ್ಲಿ ಅದ್ದೂರಿ ಸ್ವಾಗತ

ರಾಯಚೂರು: ರೈತರ ನೀರಾವರಿ ಹಕ್ಕಿಗಾಗಿ ನಡೆಯುತ್ತಿರುವ ಬೃಹತ್ ಪಾದಯಾತ್ರೆಯೂ ಇಂದು ಜಾಲಹಳ್ಳಿ ತಲುಪಿದ್ದು, ವಿವಿಧ ಸಂಘ ಸಂಸ್ಥೆಯ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡು ಪುಷ್ಪಾ ಎರಚಿ ಸ್ವಾಗತಿಸಿದರು.

ನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾ ಅರ್ಪಣೆ ಮಾಡುವ ಮೂಲಕ ಪಾದಯಾತ್ರೆ ಮುಂದುವರಿಸಿದರು.

ಪ್ರಗತಿಪರ ಮುಖಂಡರಾದ ರಂಗಣ್ಣ ಕೋಲ್ಕಾರ್ ಮಾತನಾಡಿ, ನೀರಿಗಾಗಿ ತಾಲೂಕಿನಲ್ಲಿ ಬೃಹತ್ ಮಟ್ಟದ ರೈತರು ಹೋರಾಟಗಳನ್ನು ಕೈಗೆ ಎತ್ತಿಕೊಂಡಿದ್ದಾರೆ, ಪಾದಯಾತ್ರೆ ಮಾಡುತ್ತಿದ್ದಾರೆ,ಸರ್ಕಾರ ಎಚ್ಚೆತ್ತುಕೊಂಡು ಸಮರ್ಪಕವಾಗಿ ರೈತರ ಬೆಳೆಗಳಿಗೆ ನೀರು ಹರಿಸುವಂತಾಗಬೇಕು ಎಂದು ಒತ್ತಾಯಿಸಿದರು ಅಲ್ಲದೇ ನಾರಾಯಣಪುರ ಡ್ಯಾಮ್ ಚಲೋ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ರೈತರ ಹಕ್ಕು, ಕೃಷಿಯ ಉಳಿವು ಹಾಗೂ ನೀರಾವರಿ ಸೌಲಭ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಪಾದಯಾತ್ರೆ ನೇತೃತ್ವ ವಹಿಸಿದ ರೈತ ಸಂಘದ ರಾಜ್ಯಾದ್ಯಕ್ಷ ಮಸ್ತಾನ್ ನಾಯಕ ವಿನಂತಿಸಿದರು.

ನೀರು ನಮ್ಮ ಹಕ್ಕು - ರೈತರ ಉಳಿವಿಗಾಗಿ ನಮ್ಮ ಹೋರಾಟ.
📲Get App