🔥 TRENDING তৃণমূল পন্থী মনোভাব বিজেপি কর্মীরা ২০০... UP Congress In‑Charge Says SP Alliance... Taj Mahal Urs Committee Demands Action... Woman and Two Daughters Perish in Hous... Sikkim to Host 3rd All‑India Judges Ba... जैसलमेर में विधायक महंत प्रतापपुरी महा...
19 Nov 2026•
ગુજરાતી मराठी ਪੰਜਾਬੀ বাংলা

ಸೋನಿಯಾ ಗಾಂಧಿಯವರ ಆತ್ಮಕಥೆಯ ಕುರಿತಾಗಿ ಬಹುತೇಕ ಪತ್ರಿಕೆಗಳಲ್ಲಿ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ.

✍️ Reporter: Ningappa 🗓 16 Nov 2026, 03:41 PM 👁 43
Share: 💬 WhatsApp 📘 Facebook 𝕏 Post
ಸೋನಿಯಾ ಗಾಂಧಿಯವರ ಆತ್ಮಕಥೆಯ ಕುರಿತಾಗಿ ಬಹುತೇಕ ಪತ್ರಿಕೆಗಳಲ್ಲಿ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ.

ಲೇಖನ..

ತಣ್ಣನೆಯ ವ್ಯಕ್ತಿತ್ವದ ಈ ಹಿರಿಯ ಜೀವ ತಮ್ಮ ಬದುಕಿನುದ್ದಕ್ಕೂ ವಿದೇಶಿ ಹೆಣ್ಣುಮಗಳು ಎಂಬ ಟೀಕೆ ಯನ್ನು ಎದುರಿಸುತ್ತಾ, ಅತ್ತೆ ಇಂದಿರಾಗಾಂಧಿ ಮತ್ತು ಪತಿ ರಾಜೀವ್ ಗಾಂಧಿಯವರ ಹತ್ಯೆಗೆ ಸಾಕ್ಷಿಯಾದವರು. ಈ ಕಾರಣದಿಂದಾಗಿ ಅವರ ಅನುಭವ ಮತ್ತು ಅಭಿವ್ಯಕ್ತಿಗೆ ಒಂದು ಮೌಲ್ಯವಿದೆ.

ತಮ್ಮ ಕುಟುಂಬದ ದುರಂತ ಕುರಿತು ಎಂದಿಗೂ ಬಹಿರಂಗವಾಗಿ ಮಾತನಾಡದೆ, ಒಳಗೊಳಗೆ ಅತ್ತು ತಮ್ಮನ್ನು ಸಂತೈಸಿಕೊಂಡರು. ಬೇರೆ ಯಾರೇ ಆಗಿದ್ದರೂ, ದೇಶ ತ್ಯೆಜಿಸಿ, ಮಕ್ಕಳನ್ನು ಕರೆದುಕೊಂಡು ಹೋಗಿ ವಿದೇಶದಲ್ಲಿ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಆದರೆ, ಸೋನಿಯಾ ಅವರು ಸೊಸೆಯಾಗಿ ಬಂದ ಕುಟುಂಬದ ರಾಜಕೀಯ ಪರಂಪರೆಯನ್ನು ಮುಂದುವರಿಸುವ ನೈತಿಕ ಜವಾಬ್ದಾರಿ ಇತ್ತು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಹಾಗಾಗಿ ಎಲ್ಲಾ ಅಪಮಾನ, ಟೀಕೆಗಳನ್ನು ಸಹಿಸಿಕೊಂಡು, ಬದುಕಿದ ಅವರ ವ್ಯಕ್ತಿತ್ವ ಶ್ಲಾಘನೀಯವಾದುದು. ತಮ್ಮ ಮೂರೂವರೆ ದಶಕದ ರಾಜಕೀಯ ಅನುಭವವನ್ನು ದಾಖಲಿಸುವ ವಿಚಾರದಲ್ಲಿ ಹಾಗೂ ಎದುರಾಳಿ ಪಕ್ಷಗಳ ನಾಯಕರ ಕುರಿತು ಪ್ರಸ್ತಾಪಿಸುವಲ್ಲಿ ಎಲ್ಲಿಯೂ ಸಂಯಮ ಕಳೆದುಕೊಳ್ಳದೆ ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ ಎಂದು ಬಹುತೇಕ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂಗತಿ ನಿಜ ಕೂಡಾ ಹೌದು. ಏಕೆಂದರೆ, ಸೋನಿಯಾ ಗಾಂಧಿಯವರು, ಬಿ.ಜೆ.ಪಿ.ಯ ಕಂಗನಾ ರಾವತ್ ಅಥವಾ ಸ್ಮೃತಿ ಇರಾನಿ ರೀತಿಯಲ್ಲಿ ಮೂರನೇ ದರ್ಜೆ ಸಂಸ್ಕೃತಿಯ ರಾಜಕೀಯ ಮಹಿಳೆಯಲ್ಲ. ಸೋನಿಯಾ ಅವರ ಕೃತಿಗೆ ಜಾಗತಿಕ ಮಟ್ಟದಲ್ಲಿ ಕೂಡಾ ಒಳ್ಳೆಯ ಬೇಡಿಕೆ ಇದೆ.

ಈ ಕೃತಿಯನ್ನು ಭಾರತದ ಪ್ರಾದೇಶಿಕತೆ ಭಾಷೆಗಳಿಗೆ ಅನುವಾದಿಸಿ, ಕಾಂಗ್ರೆಸ್ ಕಾರ್ಯಕರ್ತರಿಗೆ ತಲುಪಿಸುವ ಕೆಲಸವನ್ನು ಆಯಾ ರಾಜ್ಯದ ಘಟಕದ ಪದಾಧಿಕಾರಿಗಳು ಕೈಗೆತ್ತಿಕೊಳ್ಳಬೇಕಿದೆ.

ಜಗದೀಶ್ ಕೊಪ್ಪ
📲Get App