🔥 TRENDING ପାରାଦୀପ ବନ୍ଦରରେ ୩ ନମ୍ବର ବିପଦ ସଙ୍କେତ ଜା... হজবিবিডাঙ্গা পঞ্চায়েতে অনাস্থা ভোটে হ... ବ୍ରହ୍ମଗିରିରେ ବାତ୍ୟା ପ୍ରସ୍ତୁତି ପାଇଁ ଜିଲ... लखनऊ के कैबिनेट ने काशी विश्वनाथ कॉरिड... ଓଡ଼ିଶାର କେନ୍ଦୁଝର, ମୟୂରଭଞ୍ଜ, ଦେବଗଡ଼ରେ ସ... ଓଡ଼ିଶା ଉପକୂଳକୁ ‘ଅକୱାନ’ ବାତ୍ୟା ଆକ୍ରମଣ,...
19 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರಿನಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ - ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ, ಸೇವಾ ಕೇಂದ್ರಗಳ ತೊಂದರೆ ವಿರುದ್ಧ ಆಕ್ರೋಶ - ಮನೆ ಸಹಾಯಧನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ - ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ

✍️ Reporter: Ningappa 🗓 16 Nov 2026, 12:57 PM 👁 50
Share: 💬 WhatsApp 📘 Facebook 𝕏 Post

ರಾಯಚೂರಿನಲ್ಲಿ CWFI ಕಟ್ಟಡ ಕಾರ್ಮಿಕರ ಪ್ರತಿಭಟನೆ - ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ, ಸೇವಾ ಕೇಂದ್ರಗಳ ತೊಂದರೆ ವಿರುದ್ಧ ಆಕ್ರೋಶ - ಮನೆ ಕಟ್ಟಲು ಸಹಾಯಧನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ - ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ

ರಾಯಚೂರಿನಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ - ಭ್ರಷ್ಟಾಚಾರ ವಿರುದ್ಧ ಆಕ್ರೋಶ, ಮನೆ ಸಹಾಯಧನಕ್ಕೆ ಒತ್ತಾಯ

ರಾಯಚೂರು: ರಾಯಚೂರು ಜಿಲ್ಲಾ ಕಟ್ಟಡ ಕಾರ್ಮಿಕರ ಫೆಡರೇಷನ್ CWFI ನಿಂದ ಸೋಮವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಕಲ್ಯಾಣ ಮಂಡಳಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು .

ಕಾರ್ಮಿಕರ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರ, ಸೇವಾ ಕೇಂದ್ರಗಳು ಕಾರ್ಮಿಕರಿಗೆ ಮಾಡುತ್ತಿರುವ ತೊಂದರೆಗಳು, ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ಸಹಾಯಧನ ಮುಂತಾದ ಬೇಡಿಕೆಗಳನ್ನು ಪರಿಹರಿಸಲು ಒತ್ತಾಯಿಸಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು CWFI ಜಿಲ್ಲಾಧ್ಯಕ್ಷರಾದ ರುದ್ರಪ್ಪ ನಾಯಕ, ಕಾರ್ಯದರ್ಶಿ ಶಬ್ಬೀರ್ ವಹಿಸಿದ್ದರು. ಪದಾಧಿಕಾರಿಗಳಾದ ನಿಂಗಪ್ಪ ವೀರಾಪೂರ, ಹನುಮಂತ ಬಿದರಾಣಿ, ಅಂಜಿನೆಯ್ಯ ಕೋಟೆ, ಕುಬೇಂದ್ರ, ರಾಜು, CITU ಕಾರ್ಯದರ್ಶಿ ಡಿ. ಎಸ್. ಶರಣಬಸವ, ರಾಮಣ್ಣ ಮಾಡಬಾಳ, ಬಾಲಯ್ಯ ಗೋಸಲ್, ಮಸ್ತಾನ ಸೇರಿದಂತೆ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.
📲Get App