🔥 TRENDING कायाकल्प अभियान के तहत स्कूलों की व्यव... Azam Khan: Today's Congress Leadership... Uttar Pradesh plants over 40 crore tre... Azam Khan mocks Asaduddin Owaisi with... Mizoram’s environmental watchdog urges... Mizoram and Assam Agree to Maintain St...
19 Nov 2026•
ગુજરાતી मराठी ਪੰਜਾਬੀ বাংলা

ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ ಬಾರದೆ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಟ - ಹಟ್ಟಿ ಹೊಸ ಬಸ್ ನಿಲ್ದಾಣದಲ್ಲಿ ದಿಢೀರನೆ ಪ್ರತಿಭಟನೆ - ಲಿಖಿತ ಭರವಸೆ ನಂತರ ಹೋರಾಟ ವಾಪಸ್

✍️ Reporter: Ningappa 🗓 12 Nov 2026, 06:38 PM 👁 68
Share: 💬 WhatsApp 📘 Facebook 𝕏 Post

ಹಟ್ಟಿಯಲ್ಲಿ ಸರ್ಕಾರಿ ಬಸ್ಸಿಗಾಗಿ ದಿಢೀರನೆ ಪ್ರತಿಭಟನೆ - ಸರಿಯಾದ ಸಮಯಕ್ಕೆ ಬಸ್ ಬಾರದೆ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಟ - ಡಿಪೋ ಮ್ಯಾನೇಜರ್ ನಿರ್ಲಕ್ಷ್ಯಕ್ಕೆ ಆಕ್ರೋಶ - CITU, CWFI, JMS, DYFI ಜಂಟಿ ಪ್ರತಿಭಟನೆ - ಹಟ್ಟಿ ಹೊಸ ಬಸ್ ನಿಲ್ದಾಣದಲ್ಲಿ ಸಾಂಕೇತಿಕ ಹೋರಾಟ - ರಾತ್ರಿ 10-11ಕ್ಕೆ ಎರಡು ಬಸ್ ಬಿಡಲು ಆಗ್ರಹ - ಲಿಖಿತ ಭರವಸೆ ನಂತರ ಹೋರಾಟ ವಾಪಸ್

ರಾಯಚೂರು: ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಿಂದ ಸುತ್ತಲಿನ ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ಸುಗಳು ಬಾರದೆ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಹೋಗದೆ ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಹೋಗದೆ ಬಸ್ ನಿಲ್ದಾಣದಲ್ಲಿ ಪರದಾಡುತ್ತಿರುವುದನ್ನು ಖಂಡಿಸಿ CITU ಸಂಘಟನೆಯ ಮುಖಂಡರು ವಿದ್ಯಾರ್ಥಿಗಳು ಸಾರ್ವಜನಿಕರೊಂದಿಗೆ ಹೊಸ ಬಸ್ ನಿಲ್ದಾಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಬಸ್ ನಿಲ್ದಾಣದ ಕಂಟ್ರೋಲ್‌ ರ ಅವರು ಸಂಚಾರಿ ನಿರೀಕ್ಷಕರನ್ನು ಕರೆಸಿ ಇಂದಿನಿಂದ ದಿನ ನಿತ್ಯ ಬಸ್ಸುಗಳು ಸರಿಯಾದ ಸಮಯಕ್ಕೆ ಓಡಾಟ ನಡೆಸಬೇಕು. ವಿದ್ಯಾರ್ಥಿಗಳು, ಸಾರ್ವಜನಿಕ ಪ್ರಯಾಣಿಕರು ದಿನ ನಿತ್ಯ ಬಸ್ಸಿಗಾಗಿ ಕಾಯುವಂತೆ ಆಗಬಾರದು.ವಿದ್ಯಾರ್ಥಿಗಳು ಬೆಳಗ್ಗೆ ಬಸ್ಸಿಗಾಗಿ ತೊಂದರೆ ಆಗದೆ ಇದ್ದರೆ ಸಂಜೆ ಸಮಯದಲ್ಲಿ ಮನೆಗೆ ತೆರಳಲು ಬಸ್ಸಿನ ಸಮಸ್ಯೆಯಾಗುತ್ತದೆ. ಮತ್ತು ಲಿಂಗಸೂಗೂರಿನಿಂದ ಹಟ್ಟಿ ಪಟ್ಟಣಕ್ಕೆ ರಾತ್ರಿ 10 ಗಂಟೆಯಿಂದ 11 ಗಂಟೆಗೆ ಯಾವುದೇ ಬಸ್ಸುಗಳು ಇರುವುದಿಲ್ಲ, ಆ ಸಮಯಕ್ಕೆ ಎರಡು ಬಸ್ಸುಗಳು ಬಿಡಬೇಕು ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಆಗುವ ತೊಂದರೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಇದನ್ನು ಸರಿಪಡಿಸದೆ ಇದ್ದಲ್ಲಿ ಹೋರಾಟ ತೀವ್ರ ಗೋಳಿಸುವುದಾಗಿ ಎಚ್ಚರಿಸಿದರು. ನಂತರ ಲಿಖಿತ ಭರವಸೆ ಕೊಡುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದಾಗ ಸಂಚಾರಿ ನಿರೀಕ್ಷಕರು ಲಿಖಿತ ಪತ್ರ ಕೊಟ್ಟು ನಂತರ ಹೋರಾಟವನ್ನು ಹಿಂಪಡೆಯಲಾಯಿತು ಎಂದು ಪ್ರತಿಭಟನಾಕಾರರು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿಂಗಪ್ಪ ಎಂ. ವೀರಾಪುರ - CITU & CWFI ತಾಲ್ಲೂಕು ಅಧ್ಯಕ್ಷರು, ಹಾಜಿಬಾಬು ಕಟ್ಟಿಮನೆ - CITU & CWFI ಕಾರ್ಯದರ್ಶಿ, ಪಂಚಾಲಯ್ಯ ಹಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
📲Get App