🔥 TRENDING Swami Aseemanand’s radical service to... ଢେଙ୍କାନାଳ ଜିଲ୍ଲାରେ ବାତ୍ୟା 'ଆକଭାନ' ନିମି... ସାଇକ୍ଲୋନ୍ ଆକ୍ବାନ୍: ଢେଙ୍କାନାଳ ପୌରପାଳିକା... US Companies Ramp Up Design and Resear... Ahmedabad Hosts Third All India Police... Karnataka vs Jharkhand: Match Preview...
20 Nov 2026•
ગુજરાતી मराठी ਪੰਜਾਬੀ বাংলা

ಹಟ್ಟಿಯಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ - ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ - ಕೇವಲ ಆಚರಣೆಗಲ್ಲ, ಸಮಾಜ ಸೇವೆಯ ಉದ್ದೇಶದಿಂದ ಆಚರಣೆ

✍️ Reporter: Ningappa 🗓 10 Nov 2026, 06:01 PM 👁 79
Share: 💬 WhatsApp 📘 Facebook 𝕏 Post

ಹಟ್ಟಿ ಚಿನ್ನದ ಗಣಿಯಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ - ಹಜರತ್ ಟಿಪ್ಪು ಸುಲ್ತಾನ್ ಕಮಿಟಿ ವತಿಯಿಂದ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ - ನ.10 ರಂದು ಸುವರ್ಣ ಭವನ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ - ಸ್ವಾಮಿ ವಿವೇಕಾನಂದ ರಕ್ತ ಭಂಡಾರ, ಲಿಂಗಸುಗೂರು ಸಹಯೋಗ - ಚರ್ಮರೋಗ ಸೇರಿದಂತೆ ಇತರೆ ಕಾಯಿಲೆಗಳ ಉಚಿತ ತಪಾಸಣೆ - ಹಟ್ಟಿ, ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಮಿಟಿ ಮನವಿ

ಹಟ್ಟಿಯಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ: ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ

ರಾಯಚೂರು/ಹಟ್ಟಿ ಚಿನ್ನದ ಗಣಿ, ನ.10: ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜನ್ಮದಿನದ ಪ್ರಯುಕ್ತ ಹಟ್ಟಿ ಚಿನ್ನದ ಗಣಿಯ ಹಜರತ್ ಟಿಪ್ಪು ಸುಲ್ತಾನ್ ಕಮಿಟಿ ವತಿಯಿಂದ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಜನ್ಮದಿನಾಚರಣೆಯನ್ನು ಆಯೋಜಿಸಲಾಗಿದೆ.

ಜನ್ಮದಿನಾಚರಣೆಯ ಅಂಗವಾಗಿ ಇಂದು (ನ.10) ಹಟ್ಟಿ ಚಿನ್ನದ ಗಣಿಯ ಸುವರ್ಣ ಭವನ ಕಲ್ಯಾಣ ಮಂಟಪದಲ್ಲಿ ಸ್ವಾಮಿ ವಿವೇಕಾನಂದ ರಕ್ತ ಭಂಡಾರ, ಲಿಂಗಸುಗೂರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಚರ್ಮರೋಗ ಸೇರಿದಂತೆ ಇತರೆ ಕಾಯಿಲೆಗಳ ತಪಾಸಣಾ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವು ಕೇವಲ ಆಚರಣೆಗೆ ಸೀಮಿತವಾಗದೇ, ಸಮಾಜ ಸೇವೆಯ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ರಕ್ತದಾನದ ಮೂಲಕ ಅಗತ್ಯವಿರುವ ರೋಗಿಗಳ ಪ್ರಾಣ ಉಳಿಸುವ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕಮಿಟಿಯ ಪ್ರಮುಖರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಮಿಟಿಯ ಮುಖಂಡರಾದ ಬುಡನ್ ಬಾಬು, ಅಮ್ಜದ್ ಎಂ.ಡಿ.ಆರ್.ಟಿ, ಸುರೇಶ್ ಮಾಚನೂರ, ಮೌಲನ್ ಸೇರಿದಂತೆ ಇತರೆ ಹಿರಿಯರು, ಯುವಕರು ಹಾಗೂ ಮುಖಂಡರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಂದಾಗಿದ್ದಾರೆ.

ಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ರಕ್ತದಾನ ಮಾಡುವುದರ ಜೊತೆಗೆ ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕಮಿಟಿ ವತಿಯಿಂದ ಕೋರಲಾಗಿದೆ.
📲Get App