🔥 TRENDING தலைஞாயிறு வேளாண்மை உதவி இயக்குனர் அலுவ... राष्ट्रीय लोक अदालत को लेकर शेखपुरा मे... जैसलमेर में पंचायत समिति व जिला परिषद... नशे के खिलाफ एकजुट हुए एकाढ़ा के छात्र... कायाकल्प अभियान के तहत स्कूलों की व्यव... Azam Khan: Today's Congress Leadership...
19 Nov 2026•
ગુજરાતી मराठी ਪੰਜਾਬੀ বাংলা

ಮುಂಬರುವ ಪಂಚಾಯತ್ ಚುನಾವಣೆಗಳಿಗೆ KRS ಪಕ್ಷ ಸಜ್ಜು - ಸಿಂಧನೂರಿನಲ್ಲಿ ತಾಲೂಕು ಪದಾಧಿಕಾರಿಗಳ ಮಹತ್ವದ ಸಭೆ - ಆಕಾಂಕ್ಷಿಗಳ ಹೆಸರು ನೋಂದಣಿಗೆ ಕರೆ

✍️ Reporter: Ningappa 🗓 12 Nov 2026, 11:05 AM 👁 73
Share: 💬 WhatsApp 📘 Facebook 𝕏 Post

ಸಿಂಧನೂರಿನಲ್ಲಿ ಮುಂಬರುವ ಪಂಚಾಯತ್ ಚುನಾವಣೆಗಳಿಗೆ KRS ಪಕ್ಷ ಸಜ್ಜು - ಸರ್ಕ್ಯೂಟ್ ಹೌಸ್‌ನಲ್ಲಿ ತಾಲೂಕು ಪದಾಧಿಕಾರಿಗಳ ಮಹತ್ವದ ಸಭೆ - ತಾ.ಪಂ, ಜಿ.ಪಂ, ಗ್ರಾ.ಪಂ ಚುನಾವಣೆ ಕುರಿತು ಚರ್ಚೆ - ಪಕ್ಷ ಬಲಪಡಿಸಲು, ಚುನಾವಣಾ ಕಾರ್ಯತಂತ್ರಕ್ಕೆ ನಿರ್ಧಾರ - ಆಕಾಂಕ್ಷಿಗಳ ಹೆಸರು ನೋಂದಣಿಗೆ ಸೂಚನೆ

ಸಿಂಧನೂರು: ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷ - ತಾಲೂಕ ಸಮಿತಿ , ಇದೇ ನ.11 ರಂದು ಸರ್ಕ್ಯೂಟ್ ಹೌಸ್‌ನಲ್ಲಿ KRS ಪಕ್ಷದ ತಾಲೂಕು ಪದಾಧಿಕಾರಿಗಳು ಹಾಗೂ ಮುಖಂಡರ ಮಹತ್ವದ ಸಭೆ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದು ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸುವ ಕುರಿತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಆಕಾಂಕ್ಷಿಗಳಿಗೆ ಆದ್ಯತೆಯ ಮೇರೆಗೆ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಆಸಕ್ತರು ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀ ಗಿರಿಯಪ್ಪ ರಾಠೋಡ್ ಅವರನ್ನು ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಕ್ಕಾಗಿ KRS ಪಕ್ಷದ ಸಂಘಟನೆಯನ್ನು ಬಲಪಡಿಸೋಣ. ಜನರ ಧ್ವನಿಯಾಗಿ ಸ್ಥಳೀಯ ಆಡಳಿತದಲ್ಲಿ ಜನಪರ ಬದಲಾವಣೆ ತರೋಣ! ಇದು ಅಧಿಕಾರಕ್ಕಾಗಿ ರಾಜಕಾರಣವಲ್ಲ, ಜನಸೇವೆಯ ಮೂಲಕ ಬದಲಾವಣೆ ತರುವ ಸಂಕಲ್ಪ ಎಂದರು.
📲Get App