ರಾಯಚೂರಿನಲ್ಲಿ ಹೊರಗುತ್ತಿಗೆ ನೌಕರರ ವೇತನ ಗುಳುಂ ಆರೋಪ ವೇತನ, EPF, ESI ನೀಡಲು ಒತ್ತಾಯ - ತನಿಖೆಗೆ ಭರವಸೆ
ರಾಯಚೂರಿನಲ್ಲಿ ಹೊರಗುತ್ತಿಗೆ ನೌಕರರ ವೇತನ ಗುಳುಂ ಆರೋಪ - ಜಿಲ್ಲಾ ಆರೋಗ್ಯ ಇಲಾಖೆ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘ-TUCI ವತಿಯಿಂದ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ - 2018 ರಿಂದ 2026 ರವರೆಗೆ ಸರಾಸರಿ 4 ತಿಂಗಳ ವೇತನ ಬಾಕಿ, ಕೆಲವರಿಗೆ 10 ತಿಂಗಳ ವೇತನ ಬಾಕಿ - EPF, ESI ತುಂಬಿಲ್ಲದ ಆರೋಪ - ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
ರಾಯಚೂರಿನಲ್ಲಿ ಹೊರಗುತ್ತಿಗೆ ನೌಕರರ ವೇತನ ಗುಳುಂ ಆರೋಪ - ಸಚಿವರಿಗೆ ಮನವಿ
ರಾಯಚೂರು: ಜಿಲ್ಲಾ ಆರೋಗ್ಯ ಇಲಾಖೆ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘ-TUCI ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಯಚೂರು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಆಸ್ಪತ್ರೆಯಲ್ಲಿ 200ಕ್ಕೂ ಹೆಚ್ಚು ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ. ಆದರೆ ಸದರಿ ಕಾರ್ಮಿಕರಿಗೆ 2018 ರಿಂದ 2026 ರವರೆಗೆ ಪ್ರತಿ ವರ್ಷವೂ ಪ್ರತಿಯೊಬ್ಬ ಕಾರ್ಮಿಕರಿಂದ ಸರಾಸರಿ ನಾಲ್ಕು ತಿಂಗಳ ವೇತನವನ್ನು ಪಾವತಿಸದೆ ಗುಳುಂ ಮಾಡಲಾಗಿದೆ. ಕೆಲವು ಕಾರ್ಮಿಕರಿಗೆ 10 ತಿಂಗಳ ವೇತನ ಪಾವತಿಸಿರುವುದಿಲ್ಲ. ಇದು ಕಾರ್ಮಿಕ ಕಾನೂನಿನ ನೇರವಾದ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಇಲಾಖೆಯ ಹಣವನ್ನು ಕಾರ್ಮಿಕರಿಗೆ ಪಾವತಿಸದೆ, ದುರ್ಬಳಕೆ ಮಾಡಿಕೊಂಡ ಭ್ರಷ್ಟಾಚಾರದ ಪ್ರಕರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದೇ ರೀತಿ, ಮೆ: ಸಾಯಿ ಎಜೆನ್ಸಿಯವರು 2019-20 ರಲ್ಲಿ 12 ತಿಂಗಳು, ಮೆ: ಸ್ವಿಸ್ ಎಜೆನ್ಸಿಯವರು 2024-25 ರ 7 ತಿಂಗಳು ಹಾಗೂ ಮೆ: ಪಾಪುಲರ್ ಎಜೆನ್ಸಿಯವರು 2025-26ರ 11 ತಿಂಗಳ EPF ಹಾಗೂ ESI ತುಂಬಿರುವುದಿಲ್ಲ. ಹಾಗೆಯೇ ARC ಏಜೆನ್ಸಿ 2022 ಹಾಗೂ 2023 ರ ಕೆಲವರ ನೌಕರರ 2 ತಿಂಗಳು 5 ತಿಂಗಳು ಬಾಕಿ ವೇತನ ನೀಡಿರುವುದಿಲ್ಲ ಎಂದು ಆರೋಪಿಸಲಾಗಿದೆ.
ಜೊತೆಗೆ, ಪ್ರತಿ ವರ್ಷವೂ ಕಾರ್ಮಿಕರನ್ನು ಹೊರಗುತ್ತಿಗೆಯಿಂದ ಮೂರು ತಿಂಗಳು ಕಾಲ ರಿಲೀವ್ ಎಂಬ ಹೆಸರಲ್ಲಿ ಕಾರ್ಮಿಕರ ವೇತನವನ್ನು ತಿಂದು ಹಾಕಲಾಗುತ್ತಿದೆ. ಗುತ್ತಿಗೆ ಕಾರ್ಮಿಕ (ರದ್ದತಿ ಹಾಗೂ ನಿಯಂತ್ರಣ) ಕಾಯ್ದೆ -1970 ರ ಪ್ರಕಾರ ಕಾರ್ಮಿಕರಿಗೆ ವಾರದ ರಜೆಗಳು, ರಾಷ್ಟ್ರೀಯ ರಜೆಗಳು, ಹೆರಿಗೆ ರಜೆಗಳು ಕೂಡ ಸಿಗುತ್ತಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಪತ್ರ ಬರೆದರೂ, ಹಲವು ಸುತ್ತಿನ ಮಾತುಕತೆ ಮಾಡಿದರೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಹಾಗೆಯೇ ಈ ತಿಂಗಳು 16.11.2026 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಮುಂದೆ ಧರಣಿ ನಡೆಸಿದಾಗ, ಸಭೆ ಕರೆದು ಲಿಖಿತ ಪತ್ರ ಬರೆದರೂ ಸಹ ನಮಗೆ ನ್ಯಾಯ ಸಿಕ್ಕಿಲ್ಲ, ಕಾರ್ಮಿಕರಿಗೆ ವೇತನ ನೀಡಿಲ್ಲ, ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಿಲ್ಲ. ಇದರಲ್ಲಿ ಹಿಂದಿನ ಹಾಗೂ ಇಂದಿನ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಗುತ್ತಿಗೆ ಏಜೆನ್ಸಿಗಳೊಂದಿಗೆ ಶಾಮೀಲಾಗಿರುತ್ತಾರೆ ಎಂದು ಆರೋಪಿಸಲಾಗಿದೆ.
ಹಾಗಾಗಿ, ಕೂಡಲೇ ಸದರಿ ಪ್ರಕರಣದ ಮೇಲೆ ವಿಶೇಷ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಕಾರ್ಮಿಕರಿಗೆ ಬರಬೇಕಾದ ಬಾಕಿ ವೇತನ, EPF ಮತ್ತು ESI ಹಾಗೂ ರಜೆಗಳ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂದು ಈ ಪತ್ರದ ಮೂಲಕ ಕೋರಲಾಗಿದೆ.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವರಿಗೆ ಮನವಿ ನೀಡಲಾಯಿತು. ಸಚಿವರು ಮಾತನಾಡಿ ಸಂಬಂಧಪಟ್ಟ ರಾಯಚೂರು ಆರೋಗ್ಯ ಅಧಿಕಾರಿಗಳ ಜೊತೆಗೆ ಮಾತನಾಡಿ ಪರಿಹರಿಸುವ ಭರವಸೆಯನ್ನು ನೀಡಿದರು. ಹಾಗೆಯೇ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತರ ಕುರಿತು ಅವರ ಸಂಬಳವನ್ನು ಹೆಚ್ಚಿಸಬೇಕೆಂದು ಮಾತನಾಡಿದಾಗ ಸಚಿವರು ಆ ವಿಷಯ ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ ಎಂದು ಉತ್ತರ ನೀಡಿದರು ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕಾಮ್ರೇಡ್ ಎಂ ನಿರಂಜನ ಕುಮಾರ್, ವೀರಭದ್ರ CHC ಮಠಮಾರಿ, ಊರುಕುಂದ PHC ಕುರುಡಿ ಸೇರಿದಂತೆ ಇತರರು ಇದ್ದರು.