🔥 TRENDING Shillong Teer Results Released for 19... Meghalaya CM Promises Baljek Airport D... Meghalaya Signs MoU with AAI to Launch... Theft Spree in Mubarakpur and Meerpur... Cold Weather Sparks Breathing Trouble... Services Set to Face Nagaland in 19 No...
20 Nov 2026•
ગુજરાતી मराठी ਪੰਜਾਬੀ বাংলা

ಈಚನಾಳ ಶಾಲೆಯಲ್ಲಿ ಶಾಲಾ ಅವಧಿಯಲ್ಲಿ ಶಿಕ್ಷಕರು ಇಲ್ಲದೇ ವಿದ್ಯಾರ್ಥಿಗೆ ಬೈಕ್ ಅಪಘಾತ, ಕಾಲು ಮುರಿತ - ಇಬ್ಬರು ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಲಿಂಗಸಗೂರು BEO - 3 ದಿನಗಳಲ್ಲಿ ಲಿಖಿತ ಸಮಜಾಯಿಷಿಗೆ ಸೂಚನೆ

✍️ Reporter: Ningappa 🗓 17 Nov 2026, 10:04 PM 👁 43
Share: 💬 WhatsApp 📘 Facebook 𝕏 Post

ಈಚನಾಳ ಶಾಲೆಯಲ್ಲಿ ಶಾಲಾ ಅವಧಿಯಲ್ಲಿ ಶಿಕ್ಷಕರು ಇಲ್ಲದೇ ವಿದ್ಯಾರ್ಥಿಗೆ ಬೈಕ್ ಅಪಘಾತ, ಕಾಲು ಮುರಿತ - ಗ್ರಾಮಸ್ಥರ ದೂರಿನ ಮೇರೆಗೆ ಸಹ ಶಿಕ್ಷಕ ಕುಮಾರಸ್ವಾಮಿ, ದೈಹಿಕ ಶಿಕ್ಷಕ ನಾರಾಯಣಪ್ಪ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ - 3 ದಿನಗಳಲ್ಲಿ ಲಿಖಿತ ಸಮಜಾಯಿಷಿ ಸಲ್ಲಿಸಲು BEO ಸೂಚನೆ, ಇಲ್ಲದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ

ಲಿಂಗಸಗೂರು: ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಲಿಂಗಸಗೂರು ವತಿಯಿಂದ ದಿನಾಂಕ 12.11.2026 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಚನಾಳ ಶಾಲೆಯ ಸಹ ಶಿಕ್ಷಕ ಶ್ರೀ ಕುಮಾರಸ್ವಾಮಿ ಮತ್ತು ದೈಹಿಕ ಶಿಕ್ಷಕ ಶ್ರೀ ನಾರಾಯಣಪ್ಪ ಅವರಿಗೆ ಶಾಲಾ ಅವಧಿಯಲ್ಲಿ ಶಾಲೆಯಲ್ಲಿ ಇಲ್ಲದೇ ಇರುವುದರಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಈಚನಾಳ ಗ್ರಾಮದ ಗ್ರಾಮಸ್ಥರ ಮೌಖಿಕ ದೂರು ದಿನಾಂಕ 11.11.2026 ರಂತೆ, ದಿನಾಂಕ 11.11.2026 ರಂದು ಮಧ್ಯಾಹ್ನದ ಶಾಲಾ ಅವಧಿಯಲ್ಲಿ ಶಾಲೆಯಲ್ಲಿ ಇಲ್ಲದೇ ಇರುವುದರಿಂದ ಅಂದು ಸದರಿ ಶಾಲೆಯಲ್ಲಿ ಕಲಿಯುತ್ತಿರುವ ಒಬ್ಬ ವಿದ್ಯಾರ್ಥಿಯು ಶಾಲೆಯಿಂದ ಹೊರಗೆ ಹೋಗಿದ್ದು, ಆ ಸಂದರ್ಭದಲ್ಲಿ ಬೈಕ್ ಅಪಘಾತವಾಗಿ ವಿದ್ಯಾರ್ಥಿಯ ಕಾಲು ಮುರಿದಿರುತ್ತದೆ. ಈ ಘಟನೆಗೆ ಪ್ರಮುಖ ಕಾರಣ ಶಿಕ್ಷಕರುಗಳು ಶಾಲೆಯಲ್ಲಿ ಇಲ್ಲದೇ ಇರುವುದು ಎಂದು ಈಚನಾಳ ಗ್ರಾಮದ ಗ್ರಾಮಸ್ಥರು ದೂರು ನೀಡಿ ಸದರಿ ಶಿಕ್ಷಕರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಶಾಲಾ ಅವಧಿಯಲ್ಲಿ ನೀವುಗಳು ಶಾಲೆಯಲ್ಲಿ ಹಾಜರಿಲ್ಲದ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಯು ಶಾಲೆಯಿಂದ ಹೊರಗಡೆ ಬಂದಿದ್ದು, ಈ ಸಂದರ್ಭದಲ್ಲಿ ಬೈಕ್ ಅಪಘಾತ ಸಂಭವಿಸಿದ್ದು, ವಿದ್ಯಾರ್ಥಿಯ ಕಾಲು ಮುರಿದಿರುತ್ತದೆ. ಇದಕ್ಕೆ ನಿಮ್ಮ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿಯೇ ಕಾರಣವಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಶಾಲಾ ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆಯ ಜವಾಬ್ದಾರಿ ಶಾಲೆಯಲ್ಲಿ ಕರ್ತವ್ಯ ನಿರತ ಶಿಕ್ಷಕರ ಮೇಲಿರುತ್ತದೆ. ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಅನಧಿಕೃತವಾಗಿ ಶಾಲೆಯಿಂದ ಹೊರಹೋಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸಹ ತಮ್ಮ ಕರ್ತವ್ಯವಾಗಿರುತ್ತದೆ.

ಘಟನೆ ನಡೆದು ಎರಡು ಮೂರು ತಾಸು ಗತಿಸಿದ್ದರೂ ಮೇಲಾಧಿಕಾರಿಗಳಿಗೆ ವಿಷಯ ತಿಳಿಸದಿರುವುದು ವಿಷಾದದ ಸಂಗತಿಯಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಆದ್ದರಿಂದ ಸದರಿ ಘಟನೆಗೆ ಸಂಬಂಧಿಸಿದಂತೆ ತಾವು ಶಾಲೆಯಲ್ಲಿ ಹಾಜರಿಲ್ಲದಿರಲು ಕಾರಣವೇನು, ವಿದ್ಯಾರ್ಥಿಯು ಶಾಲೆಯಿಂದ ಹೊರಗಡೆ ಹೋಗಿರುವುದನ್ನು ತಡೆಯಲು ಏಕೆ ಕ್ರಮ ಕೈಗೊಂಡಿಲ್ಲ, ಹಾಗೂ ಈ ಘಟನೆಗೆ ಸಂಬಂಧಿಸಿದಂತೆ ತಮ್ಮ ಕರ್ತವ್ಯ ಲೋಪಕ್ಕೆ ಕಾರಣವೇನು ಎಂಬುದರ ಕುರಿತು ಈ ನೋಟಿಸ್ ತಲುಪಿದ ದಿನಾಂಕದಿಂದ 03 ದಿನಗಳ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ಲಿಖಿತ ಸಮಜಾಯಿಷಿಯನ್ನು ಈ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.

ನಿಗದಿತ ಅವಧಿಯೊಳಗೆ ಸಮಜಾಯಿಷಿ ಸಲ್ಲಿಸದಿದ್ದಲ್ಲಿ, ಈ ಬಗ್ಗೆ ನೀವು ಹೇಳುವುದು ಏನೂ ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
📲Get App