🔥 TRENDING Bee Swarm Attacks Students at Indore C... बिहार के स्वास्थ्य मंत्री निशांत कुमार... தலைஞாயிறு வேளாண்மை உதவி இயக்குனர் அலுவ... राष्ट्रीय लोक अदालत को लेकर शेखपुरा मे... जैसलमेर में पंचायत समिति व जिला परिषद... नशे के खिलाफ एकजुट हुए एकाढ़ा के छात्र...
19 Nov 2026•
ગુજરાતી मराठी ਪੰਜਾਬੀ বাংলা

ಸಿಂಧನೂರಿನಲ್ಲಿ AISA ತಾಲೂಕು ಸಮಿತಿ ರಚನೆ - ತಾಲೂಕು ಸಂಚಾಲಕರಾಗಿ ಪ್ರಭುಲಿಂಗ ದೀನಸಮುದ್ರ, ಮಲ್ಲಿಕಾರ್ಜುನ ಆಯ್ಕೆ - ಶಿಕ್ಷಣ ಖಾಸಗೀಕರಣ, ನಿರುದ್ಯೋಗ, ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ನಿರ್ಧಾರ

✍️ Reporter: Ningappa 🗓 15 Nov 2026, 07:33 PM 👁 52
Share: 💬 WhatsApp 📘 Facebook 𝕏 Post

ಸಿಂಧನೂರಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA) ತಾಲೂಕು ಸಮಿತಿ ರಚನೆ - ತಾಲೂಕು ಸಂಚಾಲಕರಾಗಿ ಪ್ರಭುಲಿಂಗ ದೀನಸಮುದ್ರ, ಮಲ್ಲಿಕಾರ್ಜುನ ಆಯ್ಕೆ - ವಿದ್ಯಾರ್ಥಿ ಹಕ್ಕುಗಳ ರಕ್ಷಣೆ, ವೈಜ್ಞಾನಿಕ, ಸಮಾನ, ಗುಣಮಟ್ಟದ ಶಿಕ್ಷಣ, ಸಾಮಾಜಿಕ ನ್ಯಾಯಕ್ಕಾಗಿ ಬಲಿಷ್ಠ ವಿದ್ಯಾರ್ಥಿ ಚಳವಳಿಗೆ ನಿರ್ಧಾರ

ಸಿಂಧನೂರಿನಲ್ಲಿ AISA ತಾಲೂಕು ಸಮಿತಿ ರಚನೆ - ಪ್ರಭುಲಿಂಗ ದೀನಸಮುದ್ರ, ಮಲ್ಲಿಕಾರ್ಜುನ ಸಂಚಾಲಕರಾಗಿ ಆಯ್ಕೆ

ರಾಯಚೂರು: ಸಿಂಧನೂರು ತಾಲೂಕಿನಲ್ಲಿ ವಿದ್ಯಾರ್ಥಿಗಳ ಹಕ್ಕುಗಳು, ಶಿಕ್ಷಣದ ಖಾಸಗೀಕರಣ, ನಿರುದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆ ಹಾಗೂ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟವನ್ನು ಬಲಪಡಿಸುವ ಉದ್ದೇಶದಿಂದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (AISA) ಸಿಂಧನೂರು ತಾಲೂಕು ಸಮಿತಿಯನ್ನು ರಚಿಸಲಾಯಿತು.

ತಾಲೂಕು ಸಂಚಾಲಕರಾಗಿ ಪ್ರಭುಲಿಂಗ ದೀನಸಮುದ್ರ ಹಾಗೂ ಮಲ್ಲಿಕಾರ್ಜುನ ಅವರನ್ನು ಆಯ್ಕೆ ಮಾಡಲಾಯಿತು.

ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ, ವೈಜ್ಞಾನಿಕ ಶಿಕ್ಷಣ, ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿ, ಬಲಿಷ್ಠ ವಿದ್ಯಾರ್ಥಿ ಚಳವಳಿಯನ್ನು ಕಟ್ಟುವ ತೀರ್ಮಾನ ಕೈಗೊಳ್ಳಲಾಯಿತು.

ಸಂವಿಧಾನ, ಪ್ರಜಾಪ್ರಭುತ್ವ, ವೈಚಾರಿಕತೆ ಮತ್ತು ವಿದ್ಯಾರ್ಥಿ ಐಕ್ಯತೆಯ ಆಶಯಗಳೊಂದಿಗೆ ಸಿಂಧನೂರು ತಾಲೂಕಿನಲ್ಲಿ AISA ಸಂಘಟನೆಯನ್ನು ಬಲಪಡಿಸಲು ಹೊಸ ಸಮಿತಿ ಮುಂದಾಗಿದೆ. ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಒಂದಾಗೋಣ, ಹೋರಾಡೋಣ ಎಂದು ಕರೆ ನೀಡಿದರು.
📲Get App