🔥 TRENDING बाड़मेर में चुनावी पारा चढ़ा, परिणाम क... Nagaland Unveils New Agarwood Policy t... Two killed, six injured as Fortuner pl... Delhi records season's coldest morning... Health worker’s car seized with foreig... Four dead, three injured in head‑on ca...
19 Nov 2026•
ગુજરાતી मराठी ਪੰਜਾਬੀ বাংলা

ನಿರ್ಗತಿಕ ವೃದ್ಧೆಗೆ ಕಾರುಣ್ಯ ನೆಲೆ ಆಶ್ರಯ - ಉಮಲೂಟಿಯಲ್ಲಿ ದಿನಗಳಿಂದ ವಾಸವಿದ್ದ 67 ವರ್ಷದ ಲಕ್ಷ್ಮಿ ಅವರನ್ನು ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮಕ್ಕೆ ಕರೆತಂದು ಆಶ್ರಯ - ಕುಟುಂಬ ಪತ್ತೆ ಹಚ್ಚಿ ಮನೆಗೆ ಸೇರಿಸುವ ಪ್ರಯತ್ನ - ಡಾ. ಚನ್ನಬಸವ ಸ್ವಾಮಿ ಹಿರೇಮಠ

✍️ Reporter: Ningappa 🗓 18 Nov 2026, 03:56 PM 👁 31
Share: 💬 WhatsApp 📘 Facebook 𝕏 Post

ನಿರ್ಗತಿಕ ವೃದ್ಧೆಗೆ ಕಾರುಣ್ಯ ನೆಲೆ ಆಶ್ರಯ - ಉಮಲೂಟಿಯಲ್ಲಿ ದಿನಗಳಿಂದ ವಾಸವಿದ್ದ 67 ವರ್ಷದ ಲಕ್ಷ್ಮಿ ಅವರನ್ನು ಗ್ರಾಮಸ್ಥರ ಮಾಹಿತಿ, ತುರುವಿಹಾಳ ಪೊಲೀಸರ ಸೂಚನೆಯಂತೆ ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮಕ್ಕೆ ಕರೆತಂದು ಆಶ್ರಯ - ಕುಟುಂಬ ಇದ್ದರೆ ಮನವೊಲಿಸಿ ಮನೆಗೆ ಸೇರಿಸುವ ಪ್ರಯತ್ನ, ಇಲ್ಲದಿದ್ದರೆ ಶಾಶ್ವತ ಆಶ್ರಯ

ನಿರ್ಗತಿಕ ವೃದ್ಧೆಗೆ ಕಾರುಣ್ಯ ನೆಲೆ ಆಶ್ರಯ

ಸಿಂಧನೂರು: ತಾಲೂಕಿನ ತುರುವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಉಮಲೂಟಿ ಗ್ರಾಮದಲ್ಲಿ ಸುಮಾರು ದಿನಗಳಿಂದ ವಾಸವಾಗಿದ್ದ ನಿರ್ಗತಿಕ ವೃದ್ಧೆ ಲಕ್ಷ್ಮಿ ಗಂ. ಪಂಪನಗೌಡ ಸಾ. ಬೆಳ್ಳಿಗನೂರು ವಯಸ್ಸು 67 ಇವರನ್ನು ಉಮಲೂಟಿ ಗ್ರಾಮಸ್ಥರ ಮಾಹಿತಿಯ ಮೇರೆಗೆ ಮತ್ತು ತುರುವಿಹಾಳ ಪೊಲೀಸ್ ಠಾಣೆ ಪಿ.ಎಸ್.ಐ. ಅಧಿಕಾರಿಗಳಾದ ಯರಿಯಪ್ಪ ಅಂಗಡಿ ಅವರ ಸೂಚನೆಯಂತೆ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಕರೆತಂದು ಆಶ್ರಯ ನೀಡಲಾಗಿದೆ.

ಈ ಸಂದರ್ಭದಲ್ಲಿ ಉಮಲೂಟಿ ಗ್ರಾಮದಲ್ಲಿ ನಿರ್ಗತಿಕ ವೃದ್ಧೆಯನ್ನು ಸ್ವಚ್ಛಗೊಳಿಸಿ ಆಶ್ರಮದ ಕಾರ್ಯ ಅಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ, ಈ ತಾಯಿಯನ್ನು ನಾವು ಕರೆದುಕೊಂಡು ಹೋಗಿ ತಾತ್ಕಾಲಿಕವಾಗಿ ಆಶ್ರಯ ನೀಡುತ್ತೇವೆ. ನಂತರ ಇವರಿಗೆ ಸಂಬಂಧಪಟ್ಟವರನ್ನು ಪತ್ತೆ ಹಚ್ಚಿ ಇವರಿಗೆ ಕುಟುಂಬ ಇದ್ದರೆ ಮನವೊಲಿಸಿ ಅವರನ್ನು ಅವರ ಮನೆಗೆ ಸೇರಿಸುವ ಪ್ರಯತ್ನ ಮಾಡುತ್ತೇನೆ. ಒಂದು ವೇಳೆ ಇವರಿಗೆ ಯಾರು ಇಲ್ಲ ಎಂದು ಖಚಿತವಾದಾಗ ಮಾತ್ರ ನಾವು ಶಾಶ್ವತವಾಗಿ ಆಶ್ರಯ ನೀಡುತ್ತೇವೆ ಎಂದರು.

ಇಂತಹ ನೊಂದ ನಿರ್ಗತಿಕರನ್ನು ರಕ್ಷಣೆ ಮಾಡುವುದು ನಮ್ಮ ಕಾರುಣ್ಯ ಕುಟುಂಬದ ಮೂಲ ಉದ್ದೇಶವಾಗಿದೆ. ಈ ಎಲ್ಲಾ ಕಾರ್ಯಗಳಿಗೆ ದಾನಿಗಳು ನಮಗೆ ಸಹಾಯ ಸಹಕಾರ ಮಾಡುತ್ತಾ ಸಮಾಜದಲ್ಲಿನ ಅನಾಥ ಎನ್ನುವ ಪದವನ್ನು ಅಳಿಸಿ ಹಾಕುತ್ತಿದ್ದಾರೆ. ಈಗಾಗಲೇ ಆಶ್ರಮದಲ್ಲಿ ಆಶ್ರಯದಾತರುಗಳ ಸಂಖ್ಯೆ ಜಾಸ್ತಿ ಆಗಿರುವುದರಿಂದ ಆಶ್ರಮಕ್ಕೆ ಇನ್ನೂ ಹೆಚ್ಚಿನ ಮಟ್ಟದ ಸಹಾಯದ ಅವಶ್ಯಕತೆ ಇದೆ ಆದ್ದರಿಂದ ದಯಾಳುಗಳಾದ ನಾಡಿನ ಎಲ್ಲಾ ಕರುಣಾಮಯಿ ಮನಸ್ಸುಗಳಲ್ಲಿ ನಾವು ಸಹಾಯಕ್ಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದರು.

ಇಷ್ಟು ದಿನಗಳ ಕಾಲ ಈ ತಾಯಿಯನ್ನು ಹಾರೈಕೆ ಮಾಡಿದ ಗ್ರಾಮಸ್ಥರಿಗೆ ಮತ್ತು ವಿಶೇಷವಾಗಿ ಕಾರುಣ್ಯ ಕುಟುಂಬದ ಮಾರ್ಗದರ್ಶಕರಾದ ಸೋಮನಾಥ ಜಾಗೀರ್ ದಾರ್ ಇವರಿಗೆ ನಮ್ಮ ಕರುಣೆಯ ಕಾರುಣ್ಯ ಕುಟುಂಬದ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ಎಂದು ಮಾತನಾಡಿದರು.

ಈ ಸಮಯದಲ್ಲಿ ಆಶ್ರಮದ ಸಿಬ್ಬಂದಿಗಳಾದ ಮರಿಯಪ್ಪ, ಹರ್ಷವರ್ಧನ, ವಿದ್ಯಾಶ್ರೀ ಹಾಗೂ ಉಮಲೂಟಿಯ ಗ್ರಾಮಸ್ಥರು ಮತ್ತು ತುರುವಿಹಾಳ ಪೊಲೀಸ್ ಠಾಣೆಯ ಪೊಲೀಸರು ಉಪಸ್ಥಿತರಿದ್ದರು.
📲Get App