🔥 TRENDING विष्णु धाम महोत्सव की तैयारियों का डीए... गुरवा चौक में बिना नंबर प्लेट गाड़ी से... তৃণমূল পন্থী মনোভাব বিজেপি কর্মীরা ২০০... UP Congress In‑Charge Says SP Alliance... Taj Mahal Urs Committee Demands Action... Woman and Two Daughters Perish in Hous...
19 Nov 2026•
ગુજરાતી मराठी ਪੰਜਾਬੀ বাংলা

ಆರೋಗ್ಯ ಕಾರ್ಮಿಕರ ಹೊಸ ವೇತನಕ್ಕೆ ಒತ್ತಾಯ; ಸ್ಪಂದಿಸಿದ ಉನ್ನತಾಧಿಕಾರಿಗಳು! - 5 ತಿಂಗಳ ಅರಿಯರ್ಸ್ ಸಮೇತ ಪರಿಷ್ಕೃತ ವೇತನಕ್ಕೆ TUCI ಒತ್ತಾಯ ಪತ್ರ - ಸೋಮವಾರವೇ ವಿ.ಸಿ. ಮೀಟಿಂಗ್ ನಡೆಸಿ ಏಜೆನ್ಸಿಗಳಿಗೆ ಸೂಚನೆ ನೀಡುವ ಭರವಸೆ

✍️ Reporter: Ningappa 🗓 13 Nov 2026, 08:33 PM 👁 63
Share: 💬 WhatsApp 📘 Facebook 𝕏 Post

ಆರೋಗ್ಯ ಕಾರ್ಮಿಕರ ಹೊಸ ವೇತನಕ್ಕೆ ಒತ್ತಾಯ; ಸ್ಪಂದಿಸಿದ ಉನ್ನತಾಧಿಕಾರಿಗಳು - ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ಕಾರ್ಮಿಕರಿಗೆ 5 ತಿಂಗಳ ಅರಿಯರ್ಸ್ ಸಮೇತ ಪರಿಷ್ಕೃತ ವೇತನಕ್ಕೆ ಒತ್ತಾಯ - 22-5-2026 ರ ಅಧಿಸೂಚನೆ ಪಾಲಿಸಲು ಆಗ್ರಹ - ಸೋಮವಾರವೇ ವಿ.ಸಿ. ಮೀಟಿಂಗ್ ಭರವಸೆ

ಆರೋಗ್ಯ ಕಾರ್ಮಿಕರ ಹೊಸ ವೇತನಕ್ಕೆ ಒತ್ತಾಯ; ಸ್ಪಂದಿಸಿದ ಉನ್ನತಾಧಿಕಾರಿಗಳು!

ರಾಯಚೂರು: ಆರೋಗ್ಯ ಇಲಾಖೆಯ ಸಿ ಮತ್ತು ಡಿ ಗ್ರೂಪ್ ಹೊರ ಗುತ್ತಿಗೆ ಕಾರ್ಮಿಕರಿಗೆ 5 ತಿಂಗಳ ಅರಿಯರ್ಸ್ ಸಮೇತ, ಪರಿಷ್ಕೃತ ವೇತನ ಪಾವತಿಸುವಂತೆ ಇಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಋತ್ವಿಕ್ ಪಾಂಡೆ, ಆಯುಕ್ತರಾದ ಶ್ರೀ ಗುರುದತ್ತ ಹೆಗಡೆ ಹಾಗೂ ಇಲಾಖೆಯ ನಿರ್ದೇಶಕರಾದ ಡಾ. ರಜನಿ ಎಂ ಅವರಿಗೆ ಆರೋಗ್ಯ ಇಲಾಖೆ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘ (TUCI) ದ ಮೂಲಕ ಒತ್ತಾಯ ಪತ್ರ ಸಲ್ಲಿಸಲಾಯಿತು.

ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರ ಶೋಷಣೆ ದಶಕಗಳಿಂದ ಮುಂದುವರೆದಿದೆ. ಚಾಲ್ತಿಯಲ್ಲಿರುವ ಕಾನೂನಿಗೆ ಮನ್ನಣೆ ಇಲ್ಲ. ಪರಿಷ್ಕೃತ ದರದ ಹೊಸ ವೇತನ ರಾಜ್ಯದ ಎಲ್ಲಾ ಕಾರ್ಮಿಕರ ಹಕ್ಕಾಗಿದೆ. ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ದಿ. 22-5-2026 ರ ತನ್ನ ಅಧಿಸೂಚನೆಯನ್ನು ತಾನು ಪಾಲಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಹೊಸ ದರದಲ್ಲಿ ವೇತನ ಪಾವತಿ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಡಾ. ರಜನಿ ಎಂ, ನಿರ್ದೇಶಕರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸೇವೆಗಳು ಇವರು, ಬರುವ ಸೋಮವಾರವೇ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ವಿ.ಸಿ. ಮೀಟಿಂಗ್ ನಡೆಸಿ, ರಾಜ್ಯದ ಎಲ್ಲಾ ಹೊರಗುತ್ತಿಗೆ ಏಜೆನ್ಸಿಗಳಿಗೆ ಹೊಸ ಸಂಬಳ ಕುರಿತು ಸೂಚಿಸಲಾಗುವುದೆಂದು ಭರವಸೆ ನೀಡಿದರು.

ಕಾರ್ಮಿಕ ಸಂಘದ ನಿಯೋಗದಲ್ಲಿ ಆರ್. ಮಾನಸಯ್ಯ, ಆಂಜನಯ್ಯ ಅರಕೇರ, ಶಂಕರಪ್ಪ ಗುಂಡಸಾಗರ, ನಾಗಯ್ಯಸ್ವಾಮಿ ಮುಂತಾದವರಿದ್ದರು.
📲Get App