🔥 TRENDING Anirudh Ravichander Shares Rare Weddin... Ranbir Kapoor's 'Ramayana' Tops Box Of... Ramayana Maintains Strong Box Office P... Yash Becomes Only Indian Actor with Tw... Sourav Kothari Tops Group, Secures Spo... Telangana Launches Mee Seva Online Por...
20 Nov 2026•
ગુજરાતી मराठी ਪੰਜਾਬੀ বাংলা

ಹಟ್ಟಿಯಲ್ಲಿ ಸಿಐಟಿಯು ವತಿಯಿಂದ ದೆಹಲಿ ಸಂಸತ್ ಚಲೋ ಪೋಸ್ಟರ್ ಬಿಡುಗಡೆ - 4 ಕಾರ್ಮಿಕ ಸಂಹಿತೆ ಕೈಬಿಡಿ, ಕನಿಷ್ಠ ವೇತನ ರೂ.42,000, ಪಿಂಚಣಿ ರೂ.21,000ಕ್ಕೆ ಆಗ್ರಹ

✍️ Reporter: Ningappa 🗓 08 Nov 2026, 08:41 AM 👁 50
Share: 💬 WhatsApp 📘 Facebook 𝕏 Post

ಹಟ್ಟಿ ಚಿನ್ನದ ಗಣಿಯಲ್ಲಿ ಸಿಐಟಿಯು ವತಿಯಿಂದ ಡಿಸೆಂಬರ್ 1, 2, 3ರ ದೆಹಲಿ ಸಂಸತ್ ಚಲೋ ಪ್ರತಿಭಟನಾ ಪೋಸ್ಟರ್ ಬಿಡುಗಡೆ - ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ - 4 ಕಾರ್ಮಿಕ ಸಂಹಿತೆ ಕೈಬಿಡಿ, ಸಂಪೂರ್ಣ ಸುರಕ್ಷತೆ, ಕನಿಷ್ಠ ವೇತನ ರೂ.42,000, ಪಿಂಚಣಿ ರೂ.21,000, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹ

ರಾಯಚೂರು/ಹಟ್ಟಿ ಚಿನ್ನದ ಗಣಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 1, 2 ಮತ್ತು 3 ರಂದು ದೆಹಲಿಯ ಸಂಸತ್ ಭವನದ ಬಳಿ ನಡೆಯಲಿರುವ ಬೃಹತ್ ಸಂಸತ್ ಚಲೋ ಕಾರ್ಮಿಕರ ಪ್ರತಿಭಟನೆಯ ಪೋಸ್ಟರ್ ಅನ್ನು ಹಟ್ಟಿ ಚಿನ್ನದ ಗಣಿಯ ಮಲ್ಲಪ್ಪ ಶಾಫ್ಟ್ ಗೇಟ್ ಹಾಗೂ ಇಂಜಿನಿಯರಿಂಗ್ ವಿಭಾಗದ ಮುಖ್ಯ ದ್ವಾರದ ಮುಂದೆ ಬಿಡುಗಡೆ ಮಾಡಲಾಯಿತು.

ಕೇಂದ್ರ ಸಮಿತಿ ಸಿಐಟಿಯು (CITU) ಸಂಘಟನೆಯ ನೇತೃತ್ವದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯ ಪ್ರಮುಖ ಬೇಡಿಕೆಗಳು:
ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು (Labour Codes) ಕೈಬಿಡಬೇಕು.
ಕಾರ್ಮಿಕರಿಗೆ ಸಂಪೂರ್ಣ ಸುರಕ್ಷತೆ ಹಾಗೂ ಕನಿಷ್ಠ ವೇತನ ಕಲ್ಪಿಸಬೇಕು.
ಕನಿಷ್ಠ ಮಾಸಿಕ ಪಿಂಚಣಿಯನ್ನು ರೂ.21,000 ಕ್ಕೆ ಏರಿಸಬೇಕು.
ಕನಿಷ್ಠ ವೇತನವನ್ನು ರೂ.42,000 ಕ್ಕೆ ನಿಗದಿಪಡಿಸಬೇಕು.
ಸಾಮಾಜಿಕ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ಮುಂತಾದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 1, 2 ಮತ್ತು 3 ರಂದು ದೆಹಲಿಯಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.

ಈ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರತಿನಿಧಿಗಳಾದ ಕಾಮ್ರೇಡ್ ಯಂಕೂಬ ಮಿಯಾಪೂರು, ಚಂದ್ರಶೇಖರ ನೆಲೂಗಿ, ಕಾರ್ಯಕರ್ತರಾದ ಸೋಮಣ್ಣ ನಾಯಕ, ಬಸವರಾಜ ನಗನೂರು, ಅಲ್ಲಾಭಕ್ಷಾ ದೇವಾಪೂರ, ಖಾಜಾ ಟಿನ್, ವೆಂಕಟೇಶ ಗೋರಕಲ್ಲು, ನಿಂಗಪ್ಪ ಎಂ. ವೀರಾಪೂರು, ಪಂಚಲಯ್ಯ ಹಟ್ಟಿ, ಹಾಜಿಬಾಬು ಕಟ್ಟೀಮನಿ, ಪಕ್ರುದ್ದಿನ್ ಮುಲ್ಲಾ, ಮಹಾಂತೇಶ, ಶಿವು ಚಿಕ್ಕನಗನೂರು ಸೇರಿದಂತೆ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು.
📲Get App