🔥 ट्रेंडिंग रामगढ़ में भक्तों के साथ सवारी कर रही... कर्नाटक के मुख्यमंत्री डी.के. शिवाकुमा... बिहार से पंजाब जाने वाली ट्रेन में भीड... एनआई कार्य के चलते दिसंबर में कई ट्रेन... रामगढ़ में तेज़ गति से चल रही SUV ने द... अकाश दीप को कॉनकशन के कारण न्यूज़ीलैंड...
29 नव. 2026•
ગુજરાતી मराठी ਪੰਜਾਬੀ বাংলা

ದೇವದುರ್ಗ ತಾಲೂಕಿಗೆ ಸೇರ್ಪಡೆ ಬೇಡಿಕೆ: ಡಿ.4ರಂದು ಪಲಕನಮರಡಿಯಲ್ಲಿ ಗ್ರಾಮಸಭೆಆರು ಗ್ರಾಮಗಳ ತಾಲೂಕು ಬದಲಾವಣೆ ಕುರಿತು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲು ಅಧಿಕಾರಿಗಳ ನಿರ್ಧಾರ

✍️ रिपोर्टर: Khaja Hussain 🗓 29 नव. 2026, 08:07 AM 👁 14
शेयर करें: 💬 WhatsApp 📘 Facebook 𝕏 Post
ಅರಕೇರಾ ಬ್ರೇಕಿಂಗ್ ನ್ಯೂಸ್

### ದೇವದುರ್ಗ ತಾಲೂಕಿಗೆ ಸೇರ್ಪಡೆ ಬೇಡಿಕೆ: ಡಿ.4ರಂದು ಪಲಕನಮರಡಿಯಲ್ಲಿ ಗ್ರಾಮಸಭೆ

### ಆರು ಗ್ರಾಮಗಳ ತಾಲೂಕು ಬದಲಾವಣೆ ಕುರಿತು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲು ಅಧಿಕಾರಿಗಳ ನಿರ್ಧಾರ

ಪಲಕನಮರಡಿ, ನ.29: ಅರಕೇರಾ ತಾಲೂಕಿಗೆ ಒಳಪಡುವ ಪಲಕನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳನ್ನು ಅರಕೇರಾ ತಾಲೂಕಿನಲ್ಲೇ ಮುಂದುವರಿಸಬೇಕೇ ಅಥವಾ ದೇವದುರ್ಗ ತಾಲೂಕಿಗೆ ಸೇರ್ಪಡೆ ಮಾಡಬೇಕೇ ಎಂಬ ಕುರಿತು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲು ಡಿಸೆಂಬರ್ 4ರಂದು ಗ್ರಾಮಸಭೆ ಕರೆಯಲಾಗಿದೆ.

ಅರಕೇರಾ ತಹಶೀಲ್ದಾರರು ಮತ್ತು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಕಾರ್ಯಾಲಯದಿಂದ ನವೆಂಬರ್ 25ರಂದು ಈ ಕುರಿತು ಅಧಿಕೃತ ಸೂಚನಾ ಪತ್ರ ಹೊರಡಿಸಲಾಗಿದೆ.

ಪಲಕನಮರಡಿ, ವಂದಲಿ, ಮೂಡಲಗುಂಡ, ಮದರಕಲ್, ದೇವರಗುಡ್ಡ ಹಾಗೂ ಊಟಿ ಗ್ರಾಮಗಳನ್ನು ಅರಕೇರಾ ತಾಲೂಕಿನಿಂದ ಕೈಬಿಟ್ಟು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವಂತೆ ಗ್ರಾಮಸ್ಥರು ನವೆಂಬರ್ 6ರಂದು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆಯಲು ಗ್ರಾಮಸಭೆ ಆಯೋಜಿಸಲಾಗಿದೆ.

ಡಿ.4ರಂದು ಬೆಳಿಗ್ಗೆ 11 ಗಂಟೆಗೆ ಪಲಕನಮರಡಿ ಗ್ರಾಮದ ದುರ್ಗಾದೇವಿ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಸಭೆ ನಡೆಯಲಿದೆ. ಅರಕೇರಾ ತಹಶೀಲ್ದಾರರು ಹಾಗೂ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಸಭೆಯ ನೇತೃತ್ವ ವಹಿಸಲಿದ್ದಾರೆ.

ಗ್ರಾಮಸಭೆಯಲ್ಲಿ ಸಂಬಂಧಪಟ್ಟ ಆರು ಗ್ರಾಮಗಳ ಸಾರ್ವಜನಿಕರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಸೂಚಿಸಲಾಗಿದೆ. ಸಭೆಯ ಕುರಿತು ದೇವದುರ್ಗ ಮತ್ತು ಜಾಲಹಳ್ಳಿ ಪೊಲೀಸ್ ಠಾಣೆಗಳ ಅಧಿಕಾರಿಗಳು, ಪಲಕನಮರಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ.

ಈ ಸೂಚನಾ ಪತ್ರದ ಪ್ರತಿಯನ್ನು ರಾಯಚೂರು ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರಿಗೂ ಸಲ್ಲಿಸಲಾಗಿದೆ.

ಮುಂದಿನ ಬೆಳವಣಿಗೆ: ಡಿ.4ರಂದು ನಡೆಯಲಿರುವ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಯಾವ ನಿರ್ಧಾರಕ್ಕೆ ಬರುತ್ತಾರೆ ಮತ್ತು ಅವರ ಅಭಿಪ್ರಾಯದ ಆಧಾರದ ಮೇಲೆ ತಾಲೂಕು ಮರುಸೇರ್ಪಡೆ ಪ್ರಕ್ರಿಯೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ವರದಿ ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ
📲Get App