🔥 TRENDING विष्णु धाम महोत्सव की तैयारियों का डीए... गुरवा चौक में बिना नंबर प्लेट गाड़ी से... তৃণমূল পন্থী মনোভাব বিজেপি কর্মীরা ২০০... UP Congress In‑Charge Says SP Alliance... Taj Mahal Urs Committee Demands Action... Woman and Two Daughters Perish in Hous...
19 Nov 2026•
ગુજરાતી मराठी ਪੰਜਾਬੀ বাংলা

ಕಲಮಲಾದಲ್ಲಿ ಕೂಲಿಕಾರರ ಸಭೆ - ಅಳತೆಯ ನೆಪದಲ್ಲಿ ಕೂಲಿ ಕಡಿತ ಮಾಡುವ ಜೆ.ಇ.ಗಳ ವಿರುದ್ಧ ಆಕ್ರೋಶ - ಕುಡಿಯುವ ನೀರು, ನೆರಳು, ಮೂಲಭೂತ ಸೌಕರ್ಯಕ್ಕೆ ಒತ್ತಾಯ - 382 ರೂ. ಕನಿಷ್ಠ ಕೂಲಿ ಸಿಗುವವರೆಗೆ 18ರಿಂದ ಪಂಚಾಯತಿ ಮುಂದೆ ಹಗಲು ರಾತ್ರಿ ಧರಣಿ

✍️ Reporter: Ningappa 🗓 15 Nov 2026, 04:39 PM 👁 46
Share: 💬 WhatsApp 📘 Facebook 𝕏 Post

ಕಲಮಲಾದಲ್ಲಿ ಕೃಷಿ ಕೂಲಿಕಾರರ ಭೇಟಿ, ಸಭೆ - ಅಳತೆ ನೆಪದಲ್ಲಿ ಕೂಲಿ ಕಡಿತ, ಕುಡಿಯುವ ನೀರು, ನೆರಳು, ಮೂಲಭೂತ ಸೌಕರ್ಯ ಕೊರತೆಗೆ ಆಕ್ರೋಶ - ಅಧಿಕಾರಿಗಳ ನೀತಿ ವಿರುದ್ಧ ಹೋರಾಟಕ್ಕೆ ನಿರ್ಧಾರ - 382 ರೂ. ಕೂಲಿ ಸಿಗುವವರೆಗೆ 18-11-2026 ರಿಂದ ಪಂಚಾಯತಿ ಮುಂದೆ ಹಗಲು ರಾತ್ರಿ ಧರಣಿ

ಕಲಮಲಾದಲ್ಲಿ ಕೂಲಿಕಾರರ ಸಭೆ - 382 ರೂ. ಕೂಲಿ ಸಿಗುವವರೆಗೆ 18ರಿಂದ ಪಂಚಾಯತಿ ಮುಂದೆ ಹಗಲು ರಾತ್ರಿ ಧರಣಿ

ರಾಯಚೂರು: ಜಿಲ್ಲೆಯ ರಾಯಚೂರು ತಾಲೂಕಿನ ಕಲಮಲಾ ಗ್ರಾಮದಲ್ಲಿ ಇಂದು ಕೃಷಿ ಕೂಲಿಕಾರರನ್ನು ಭೇಟಿ ಮಾಡಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೂಲಿಕಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅಳತೆಯ ನೆಪ ಮಾಡಿ ಕೂಲಿಯ ಹಣ ಕಡಿಮೆ ಹಾಕುವ ಜೆ.ಇ. ಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ನೆರಳಿನ ವ್ಯವಸ್ಥೆ ಇಲ್ಲ, ಮೂಲಭೂತ ಸೌಕರ್ಯ ಇಲ್ಲ ಎಂದು ಆರೋಪಿಸಿದರು. ಕೂಲಿಕಾರರ ಬಗ್ಗೆ ಅಧಿಕಾರಿಗಳು ಅನುಸರಿಸುತ್ತಿರುವ ನೀತಿಯ ವಿರುದ್ಧ ಹೋರಾಡಲು ನಿರ್ಧರಿಸಿದರು.

₹382 ರೂಪಾಯಿ ಕನಿಷ್ಠ ಕೂಲಿ ಕೊಡುವವರೆಗೆ ಅನಿರ್ದಿಷ್ಟ ಧರಣಿ ಮಾಡಲು ನಿರ್ಧರಿಸಲಾಯಿತು. ಇದೇ ನವೆಂಬರ್ 18 ರಿಂದ ಕಲಮಲಾ ಗ್ರಾಮ ಪಂಚಾಯತಿ ಮುಂದೆ ಹಗಲು ರಾತ್ರಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು ಎಂದು ಕರಿಯಪ್ಪ ಆಚ್ಚೋಳಿ ತಿಳಿಸಿದ್ದಾರೆ.
📲Get App