🔥 TRENDING પ્રાંતિજ નજીક હાઈવે પર અકસ્માતમાં ડીઝલ... திருப்பூரை சேர்ந்த மது மயக்கத்தில் இரு... उमाशंकर के अंदाज में रसड़ा की सियासत म... కృష్ణాజిల్లా గుడివాడ పురపాలక సంఘం ఎన్న... 13 வயது யோகலட்சுமி 19 நவம்பர் 2026 கால... बाड़मेर में चुनावी पारा चढ़ा, परिणाम क...
19 Nov 2026•
ગુજરાતી मराठी ਪੰਜਾਬੀ বাংলা

ಸಿಂಧನೂರು ಬಂದ್ ಹೋರಾಟ ಯಶಸ್ವಿ - ತುಂಗಭದ್ರ ಎಡದಂಡೆ ಕಾಲುವೆಗೆ ಡಿಸೆಂಬರ್ 31ರವರೆಗೆ ನೀರು ಬಿಡಿ, ಬೆಳೆಗಳನ್ನು ರಕ್ಷಿಸಿ - ನೀರು ಬಿಡದಿದ್ದರೆ ಪ್ರತಿ ಎಕರೆಗೆ 50,000 ರೂ. ಬೆಳೆ ನಷ್ಟ ಪರಿಹಾರ ಕೊಡಿ ಎಂದು ಒತ್ತಾಯ - ರೈತ ಹೋರಾಟಕ್ಕೆ ಸಿಪಿಐ(ಎಂಎಲ್) ರೆಡ್ ಸ್ಟಾರ್ ಬೆಂಬಲ

✍️ Reporter: Ningappa 🗓 18 Nov 2026, 03:20 PM 👁 45
Share: 💬 WhatsApp 📘 Facebook 𝕏 Post

ಸಿಂಧನೂರು ಬಂದ್ ಹೋರಾಟ - ತುಂಗಭದ್ರ ಎಡದಂಡೆ ಕಾಲುವೆಗೆ ಡಿಸೆಂಬರ್ 31ರವರೆಗೆ ನೀರು ಬಿಡಿ, ಬೆಳೆಗಳನ್ನು ರಕ್ಷಿಸಿ ಎಂದು ರೈತ ಸಂಘ, ಹಸಿರು ಸೇನೆ, ತುಂಗಭದ್ರಾ ಜಲಾಶಯ ರೈತ ಒಕ್ಕೂಟ ಹೋರಾಟ ಸಮಿತಿಯಿಂದ ಒತ್ತಾಯ - ನೀರು ಬಿಡದಿದ್ದರೆ ಪ್ರತಿ ಎಕರೆಗೆ 50,000 ರೂ. ಪರಿಹಾರಕ್ಕೆ ಆಗ್ರಹ - ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಜ್ಯ ಕಾರ್ಯದರ್ಶಿ ಎಂ. ಗಂಗಾಧರ್ ಬೆಂಬಲ

ಸಿಂಧನೂರು: ತುಂಗಭದ್ರ ಎಡದಂಡೆ ಕಾಲುವೆಗೆ ಡಿಸೆಂಬರ್ 31ರವರೆಗೆ ನೀರು ಬಿಡಿ, ಬೆಳೆದು ನಿಂತಿರುವ ಬೆಳೆಗಳನ್ನು ರಕ್ಷಣೆ ಮಾಡಿ, ನೀರು ಬಿಡದಿದ್ದರೆ ಪ್ರತಿ ಎಕರೆಗೆ 50,000 ರೂ. ಬೆಳೆ ನಷ್ಟ ಪರಿಹಾರ ಕೊಡಿ ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ತುಂಗಭದ್ರಾ ಜಲಾಶಯ ರೈತ ಒಕ್ಕೂಟ ಹೋರಾಟ ಸಮಿತಿಯಿಂದ ಇಂದು ಸಿಂಧನೂರು ಬಂದ್ ಹೋರಾಟ ನಡೆಯಿತು.

ಈ ಹೋರಾಟದಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಪಾರ್ಟಿ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಎಂ. ಗಂಗಾಧರ್ ರೈತ ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಮಾಬುಸಾಬ್ ಬೆಳ್ಳಟ್ಟಿ, ಹುಲುಗಪ್ಪ ಬಳ್ಳಾರಿ, ಧರಗಯ್ಯ, ಹುಸೇನ್ ಭಾಷ ಸೇರಿದಂತೆ ತಾಲೂಕಿನ ವಿವಿಧ ದಲಿತ, ರೈತ, ಕಾರ್ಮಿಕ, ಮಹಿಳಾ, ಕನ್ನಡಪರ ಹೋರಾಟಗಾರರು ಮತ್ತು ಸಾವಿರಾರು ನೀರು ವಂಚಿತ ರೈತರು, ರೈತ ಮಹಿಳೆಯರು ಬಂದ್ ಹೋರಾಟದಲ್ಲಿ ಭಾಗವಹಿಸಿದ್ದರು.
📲Get App