🔥 TRENDING PM Modi urges Indians to heed gold pri... જુનાગઢમાં માંગરોળ ખડાયતા વણિક સમાજે શ્... Cert-IN Detects Payment Fraud on Gover... H.M. Shah to Launch Rs 5,610 crore Dev... Varanasi Film to Release in 18 Formats... *फसल बिकने के बाद ही नसीब होता है खाना...
22 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ನ.23ರಂದು ಉಚಿತ ತಪಾಸಣಾ ಶಿಬಿರ - ಹಿಮಾಂಶು ಕ್ಲಿನಿಕ್ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜನೆ - ಬೆಳಿಗ್ಗೆ 10:30ರಿಂದ ಮಧ್ಯಾಹ್ನ 2:30ರವರೆಗೆ ಶಿಬಿರ - 4 ವೈದ್ಯರಿಂದ ಉಚಿತ ತಪಾಸಣೆ

✍️ Reporter: Ningappa 🗓 22 Nov 2026, 09:34 AM 👁 14
Share: 💬 WhatsApp 📘 Facebook 𝕏 Post

ಜಾಲಹಳ್ಳಿಯಲ್ಲಿ ನ.23ರಂದು ಉಚಿತ ತಪಾಸಣಾ ಶಿಬಿರ - ಹಿಮಾಂಶು ಕ್ಲಿನಿಕ್ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜನೆ - ಬೆಳಿಗ್ಗೆ 10:30ರಿಂದ ಮಧ್ಯಾಹ್ನ 2:30ರವರೆಗೆ ಶಿಬಿರ - ಹೃದಯ, ಸಕ್ಕರೆ, ಬಿ.ಪಿ, ದಂತ, ಮಕ್ಕಳ ಸಮಸ್ಯೆಗಳಿಗೆ ಉಚಿತ ತಪಾಸಣೆ - ಸಂಪರ್ಕ: 9591174066

ದೇವದುರ್ಗ: ಹಿಮಾಂಶು ಕ್ಲಿನಿಕ್, ಬಸವಲಿಂಗಪ್ಪ ಬಾವಿ ಎದುರುಗಡೆ ಸಂತೆ ರಸ್ತೆ ಜಾಲಹಳ್ಳಿ ಹಾಗೂ ನಂದಿ ಆಸ್ಪತ್ರೆ ದೇವದುರ್ಗ ಇವರ ಸಹಯೋಗದಲ್ಲಿ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ದಿನಾಂಕ: 23 ನವೆಂಬರ್ 2026 ರಂದು ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 2:30 ಗಂಟೆಯವರೆಗೆ ಶಿಬಿರ ನಡೆಯಲಿದೆ.

ಸ್ಥಳ: ಹಿಮಾಂಶು ಕ್ಲಿನಿಕ್, ಬಸವಲಿಂಗಪ್ಪ ಬಾವಿ ಎದುರುಗಡೆ ಸಂತೆ ರಸ್ತೆ ಜಾಲಹಳ್ಳಿ.

ಶಿಬಿರದಲ್ಲಿ ಭಾಗವಹಿಸುವ ವೈದ್ಯರು:

1. ಡಾ. ಸಾಬಣ್ಣ ನಾಯಕ ನಾಗವದಿನ್ನಿ (MD General Medicine MMC Madhurai) - ಸಕ್ಕರೆ, ಹೃದಯ ರೋಗ ತಜ್ಞರು - ಹೃದಯ ಸಮಸ್ಯೆ, ಬಿ.ಪಿ. ಶುಗರ್, ಉಸಿರಾಟ ತೊಂದರೆ, ಬಿ.ಪಿ. ಅಸ್ತಮಾ, ಲಿವರ್ ಮತ್ತು ಕಿಡ್ನಿ ತೊಂದರೆ.

2. ಡಾ. ಮಲ್ಲಿಕಾರ್ಜುನ ಹಿ (MBBS, Rims Raichur) - ಕುಟುಂಬ ವೈದ್ಯರು, ಜಾಲಹಳ್ಳಿ - ಅಲರ್ಜಿ ಕೆಮ್ಮು, ರಕ್ತಮೂತ್ರಕ ಅನಾರೋಗ್ಯ, ಚರ್ಮ ರೋಗ, ಡೆಂಗ್ಯೂ ಮತ್ತು ಟೈಫಾಯ್ಡ್, ಮಂಡಿನೋವು, ಹೊಟ್ಟೆನೋವು ಸಮಸ್ಯೆ.

3. ಡಾ. ಶಶಿಕುಮಾರ್ ಹುದೇದ್ (BDS, NDC Raichur) - ದಂತ ವೈದ್ಯರು - ಹುಳುಕು ಹಲ್ಲಿನ ಚಿಕಿತ್ಸೆ, ಸಿಮೆಂಟ್ ಫಿಲ್ಲಿಂಗ್, ಬೇರು ನಾಳ ಚಿಕಿತ್ಸೆ, ಹಲ್ಲು ತೆಗೆಯುವುದು, ಹಲ್ಲು ಮತ್ತು ವಸಡಿನ ಶಸ್ತ್ರ ಚಿಕಿತ್ಸೆ, ಕೃತಕ ಹಲ್ಲು ಜೋಡಣೆ, ಹಲ್ಲು ಕೀಳುವುದು, ವಕ್ರ ದಂತ ಚಿಕಿತ್ಸೆ.

4. ಡಾ. ಅಕ್ಷತಾ ಸಾಬಣ್ಣ ನಾಯಕ (MD Paediatrics MMC Madhurai) - ನವಜಾತ ಶಿಶು ಮತ್ತು ಮಕ್ಕಳ ತಜ್ಞರು - ಮಕ್ಕಳ ಹೃದಯ ಸಮಸ್ಯೆ, ಮಕ್ಕಳ ಬೆಳವಣಿಗೆ ತೊಂದರೆ, ಉಬ್ಬಸ ಉಸಿರಾಟ ತೊಂದರೆ, ಅಪೌಷ್ಟಿಕತೆ ತೊಂದರೆ, ಎಡ್ಡೆ ತೊಂದರೆ.

ಸಾರ್ವಜನಿಕರು ಈ ಉಚಿತ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
📲Get App