🔥 TRENDING Jasmine of SR DIGI School Shines Brigh... గాయపడిన కానిస్టేబుల్ రమేష్‌కు డీఎస్పీ,... ರಾಜ್ಯ ಸರ್ಕಾರದ ಕ್ರಮಕ್ಕೆ ಬಸವರಾಜ ಧನ್ನೂರ ಸ... ರಾಯಚೂರು ಐಬಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರ... मलारना डूंगर पंचायत चुनाव में कांग्रेस... जालौर के काकरिया वास में बाबा खाटू श्य...
20 Nov 2026•
ગુજરાતી मराठी ਪੰਜਾਬੀ বাংলা
National

ಮಾದಿಗ ಸಮಾಜದ ನೌಕರರಿಗೆ ಅನ್ಯಾಯ, ತಾರತಮ್ಯ ಆರೋಪ: ನ.23ರಂದು ಕೆಕೆಆರ್‌ಟಿಸಿ ಕಚೇರಿ ಎದುರು ಪ್ರತಿಭಟನೆ

✍️ Reporter: Basavaraj pujari 🗓 20 Nov 2026, 09:31 PM 👁 13
Share: 💬 WhatsApp 📘 Facebook 𝕏 Post

ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ಬೀದರ್ ವಿಭಾಗದಲ್ಲಿ ದಲಿತ ಹಾಗೂ ಮಾದಿಗ ಸಮಾಜದ ನೌಕರರಿಗೆ ಅನ್ಯಾಯ, ತಾರತಮ್ಯ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್

ಮಾದಿಗ ಸಮಾಜದ ನೌಕರರಿಗೆ ಅನ್ಯಾಯ, ತಾರತಮ್ಯ ಆರೋಪ: ನ.23ರಂದು ಕೆಕೆಆರ್‌ಟಿಸಿ ಕಚೇರಿ ಎದುರು ಪ್ರತಿಭಟನೆ


ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ಬೀದರ್ ವಿಭಾಗದಲ್ಲಿ ದಲಿತ ಹಾಗೂ ಮಾದಿಗ ಸಮಾಜದ ನೌಕರರಿಗೆ ಅನ್ಯಾಯ, ತಾರತಮ್ಯ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘ ವತಿಯಿಂದ ನವೆಂಬರ್ 23ರಂದು ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 11 ಗಂಟೆಗೆ ಕೆಕೆಆರ್‌ಟಿಸಿ ಬೀದರ್ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ಹಿರಿಯ ಉಪಾಧ್ಯಕ್ಷ ಹಾಗೂ ವಕೀಲ ಡಾ. ರಾಜು ಕಡ್ಯಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀದರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಬಿ. ಜಾದವ್ ಅವರ ಕಾರ್ಯವೈಖರಿ ಕುರಿತು ಸಂಘಟನೆಗೆ ಹಲವು ದೂರುಗಳು ಬಂದಿವೆ. ನೌಕರರ ವಿರುದ್ಧ ಸಮರ್ಪಕ ತನಿಖೆ ನಡೆಸದೆ ಅಮಾನತು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣಗಳ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯಾಸತ್ಯತೆ ಹೊರತಂದು ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದ್ದಾರೆ.

ನೌಕರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ, ಅವರ ಹಕ್ಕುಗಳನ್ನು ರಕ್ಷಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನೆಯ ಪ್ರಮುಖ ಉದ್ದೇಶವಾಗಿದೆ.
📲Get App