🔥 TRENDING Unakoti District Launches JJM 2.0 Wate... Tripura CM attributes BJP's rising pop... India's First Organized Donkey Farm La... Himachal Pradesh Introduces Bill to Si... Himachal Pradesh to levy environmental... 12 killed in two separate road crashes...
20 Nov 2026•
ગુજરાતી मराठी ਪੰਜਾਬੀ বাংলা

ನವ್ಹಂಬರ್ 23 ರಂದು ಶಿಕ್ಷಕರಿಗಾಗಿ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆ

✍️ Reporter: Mallikarjun Gabbur 🗓 12 Nov 2026, 07:39 PM 👁 73
Share: 💬 WhatsApp 📘 Facebook 𝕏 Post

2026-27 ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಕಾರ್ಯಕ್ರಮ ಸ್ಪರ್ಧೆಗಳು ದಿನಾಂಕ 23-11-2026 ರಂದು ಬೆಳಿಗ್ಗೆ 10:00 ಗಂಟೆಗೆ ಟಿ ಎಲ್ ಸಿ ಕೇಂದ್ರ ಬಸವನಬಾಗೇವಾಡಿ ಯಲ್ಲಿ ಆಯೋಜನೆ ಮಾಡಲಾಗಿದೆ

2026-27 ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಕಾರ್ಯಕ್ರಮ ಸ್ಪರ್ಧೆಗಳು ದಿನಾಂಕ 23-11-2026 ರಂದು ಬೆಳಿಗ್ಗೆ 10:00 ಗಂಟೆಗೆ ಟಿ ಎಲ್ ಸಿ ಕೇಂದ್ರ ಬಸವನಬಾಗೇವಾಡಿ ಯಲ್ಲಿ ಆಯೋಜನೆ ಮಾಡಲಾಗಿದೆ. ಇದರಲ್ಲಿ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರು ಮತ್ತು ಅನುಷ್ಠಾನಾಧಿಕಾರಿಗಳು ಸ್ಪರ್ಧಿಸಬಹುದು.
ಜಾನಪದ ಗೀತೆ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ವಿಜ್ಞಾನ ರಸಪ್ರಶ್ನೆ ಸ್ಪರ್ಧೆ, ಸ್ಥಳದಲ್ಲಿ ಚಿತ್ರ ಬರೆಯುವ ಸ್ಪರ್ಧೆ, ಸಾಮಾನ್ಯ ರಸಪ್ರಶ್ನೆ ಸ್ಪರ್ಧೆ, ಸ್ಥಳದಲ್ಲಿ ಪಾಠೋಪಕರಣಗಳ (TLM) ತಯಾರಿಕಾ ಸ್ಪರ್ಧೆಗಳು ನಡೆಯಲಿವೆ.
ಒಬ್ಬ ಶಿಕ್ಷಕರು ಯಾವುದಾದರೂ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಶಿಕ್ಷಕರು ದಿನಾಂಕ 18-11-2026 ರ ಒಳಗಾಗಿ ಸಹಪಠ್ಯ ಚಟುವಟಿಕೆಯ ನೋಡಲ್ ಅಧಿಕಾರಿಗಳಾದ ಶ್ರೀ ಎಸ್. ಎಸ್. ಅಂಬಲಿ, ಶಿಕ್ಷಣ ಸಂಯೋಜಕರು (ಮೊಬೈಲ್: 9901446256) ಇವರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳತಕ್ಕದ್ದು ಎಂದು ಬಸವನಬಾಗೇವಾಡಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ರೇಣುಕಾ ಕಲಬುರ್ಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಧಿಕಾರಿಗಳಾದ ಶ್ರೀ ಸುನಿಲ್ ನಾಯಕ, ಶಿಕ್ಷಣ ಸಂಯೋಜಕರಾದ ಶ್ರೀ ಎಸ್ ಆರ್ ಮಣೂರ, ಶ್ರೀ ಎಸ್ ಎಸ್ ಅಂಬಲಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಮ್ ವಿ ಗಬ್ಬೂರ, ಶ್ರೀ ಆರ್ ಜಿ ಪವಾರ ಉಪಸ್ಥಿತರಿದ್ದರು.
📲Get App