🔥 TRENDING कायाकल्प अभियान के तहत स्कूलों की व्यव... Azam Khan: Today's Congress Leadership... Uttar Pradesh plants over 40 crore tre... Azam Khan mocks Asaduddin Owaisi with... Mizoram’s environmental watchdog urges... Mizoram and Assam Agree to Maintain St...
19 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರಿನಲ್ಲಿ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಅನಿರ್ದಿಷ್ಟ ಧರಣಿ - ಬಾಕಿ ವೇತನ ಪಾವತಿ, ಮೇ 22ರ ಪರಿಷ್ಕೃತ ವೇತನ ಕೂಡಲೇ ಜಾರಿಗೆ ಒತ್ತಾಯ - ಉದ್ಯೋಗ ಭದ್ರತೆ, ವಜಾ ನಿಲ್ಲಿಸಲು, ಎಲ್ಲರಿಗೆ EPF, ESI ಜಾರಿಗೆ ಆಗ್ರಹ - TUCI ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿ ಮುಂದೆ ಧರಣಿ

✍️ Reporter: Ningappa 🗓 16 Nov 2026, 03:49 PM 👁 30
Share: 💬 WhatsApp 📘 Facebook 𝕏 Post

ರಾಯಚೂರಿನಲ್ಲಿ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಅನಿರ್ದಿಷ್ಟ ಧರಣಿ - TUCI ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮುಂದೆ ಧರಣಿ - ಬಾಕಿ ವೇತನ ಪಾವತಿ, ಮೇ 22ರ ಪರಿಷ್ಕೃತ ವೇತನ ಜಾರಿ, ಉದ್ಯೋಗ ಭದ್ರತೆ, ವಜಾ ನಿಲ್ಲಿಸಲು, ಎಲ್ಲಾ ನೌಕರರಿಗೆ EPF, ESI ಜಾರಿಗೆ ಒತ್ತಾಯ

ರಾಯಚೂರಿನಲ್ಲಿ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಅನಿರ್ದಿಷ್ಟ ಧರಣಿ - ಬಾಕಿ ವೇತನ, ಪರಿಷ್ಕೃತ ವೇತನ ಜಾರಿಗೆ ಒತ್ತಾಯ

ರಾಯಚೂರು: ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಸಂಘ TUCI ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ರಾಯಚೂರಿನಲ್ಲಿ ಇಂದು ಅನಿರ್ದಿಷ್ಟ ಧರಣಿ ಹೋರಾಟ ನಡೆಯುತ್ತಿದೆ.

ಇಲಾಖೆಯಲ್ಲಿನ ಬಾಕಿ ವೇತನ ಪಾವತಿ, ಮೇ 22 ರ ಪರಿಷ್ಕೃತ ವೇತನ ಕೂಡಲೇ ಜಾರಿಯಾಗಬೇಕು, ದಶಕಗಳಿಂದ ದುಡಿಯುತ್ತಿರುವ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು, ಖಾಯಂ ನೇಮಕಾತಿಯ ನೆಪದಲ್ಲಿ ನೌಕರರನ್ನು ವಜಾಗೊಳಿಸುವುದನ್ನು ನಿಲ್ಲಿಸಬೇಕು, ಹಾಗೆಯೇ ಎಲ್ಲಾ ನೌಕರರಿಗೆ EPF, ESI ಜಾರಿಯಾಗಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

ರಾಯಚೂರು ಜಿಲ್ಲಾ ಆರೋಗ್ಯ ಇಲಾಖೆ ಸಿ & ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘ - TUCI ನೇತೃತ್ವದಲ್ಲಿ ನಡೆಯುತ್ತಿರುವ ಈ ಧರಣಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೌಕರರು ಭಾಗವಹಿಸಿದ್ದಾರೆ.
📲Get App