🔥 TRENDING कार्तिक मेले में श्रद्धालुओं से Need 2... Drishti IAS Releases Daily Madhya Prad... बिहार में दवा दुकानों पर औषधि नियंत्रण... Sidhu Moosewala’s Father Balkaur Singh... रिम्स जमीन घोटाले में ACB की बड़ी कार्... Congress moves Constitution Protection...
19 Nov 2026•
ગુજરાતી मराठी ਪੰਜਾਬੀ বাংলা

ಸಿರವಾರದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆ ಪರಿಷ್ಕರಣೆ - 2026-27ನೇ ಸಾಲಿಗೆ ನೂತನ ಬೆಲೆಪಟ್ಟಿ ಪ್ರಕಟ - 15 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

✍️ Reporter: Ningappa 🗓 09 Nov 2026, 03:38 PM 👁 74
Share: 💬 WhatsApp 📘 Facebook 𝕏 Post

2026-27ನೇ ಸಾಲಿಗೆ ಸಿರವಾರ ಉಪನೋಂದಣಿ ಕಚೇರಿ ವ್ಯಾಪ್ತಿಯ ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆ ಪರಿಷ್ಕರಣೆ - ನ.6 ರಂದು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಉಪಸಮಿತಿ ಸಭೆಯ ನಿರ್ದೇಶನದಂತೆ ಪರಿಷ್ಕರಣೆ - ಕರಡು ಬೆಲೆಪಟ್ಟಿ ಸಿರವಾರ ಉಪನೋಂದಣಿ ಕಚೇರಿಯಲ್ಲಿ ಪ್ರಕಟ - 15 ದಿನಗಳೊಳಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಅವಕಾಶ

ರಾಯಚೂರು: 2026-27ನೇ ಸಾಲಿಗೆ ಸಿರವಾರ ಉಪನೋಂದಣಿ ಕಚೇರಿಯ ವ್ಯಾಪ್ತಿಗೆ ಒಳಪಡುವ ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಿಸಲಾಗಿದೆ.

ಸಿರವಾರ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನ. 6ರಂದು ನಡೆದ ತಾಲೂಕು ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ನಿರ್ಧಾರಣಾ ಉಪಸಮಿತಿ ಸಭೆಯಲ್ಲಿ ನೀಡಿದ ನಿರ್ದೇಶನದಂತೆ ಮಾರ್ಗಸೂಚಿ ಬೆಲೆಗಳನ್ನು ಪರಿಷ್ಕರಿಸಲಾಗಿದೆ.

ಸಾರ್ವಜನಿಕರ ಮಾಹಿತಿಗಾಗಿ ಹಾಗೂ ಆಕ್ಷೇಪಣೆ ಸಲ್ಲಿಸಲು ಅನುಕೂಲವಾಗುವಂತೆ ಪರಿಷ್ಕೃತ ಬೆಲೆಪಟ್ಟಿಯ ಕರಡು ಪ್ರತಿಯನ್ನು ಸಿರವಾರ ಉಪನೋಂದಣಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ.

ಪರಿಷ್ಕೃತ ಮಾರ್ಗಸೂಚಿ ಬೆಲೆಗಳ ಕುರಿತು ಸಾರ್ವಜನಿಕರಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಕರಡು ಪ್ರತಿಯನ್ನು ಪ್ರಕಟಿಸಿದ ದಿನದಿಂದ 15 ದಿನಗಳ ಕಾಲಾವಕಾಶದೊಳಗೆ ಉಪನೋಂದಣಿ ಅಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ ಎಂದು ಉಪನೋಂದಣಿ ಅಧಿಕಾರಿ ಹಾಗೂ ತಾಲೂಕು ಸ್ಥಿರಾಸ್ತಿಗಳ ಮೌಲ್ಯ ನಿರ್ಧಾರಣಾ ಉಪಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
📲Get App