🔥 TRENDING Pro Hockey League 2026 kicks off today... Punjab National Bank Shares Reach Fres... Punjab Chemicals shares plunge to 52-w... Assam Evicted Families Hit by Bulldoze... Assam Chosen as Partner State for Vibr... Assam Cabinet Sanctions Creation of Si...
20 Nov 2026•
ગુજરાતી मराठी ਪੰਜਾਬੀ বাংলা

ಇಲಕಲ್ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ - ಅಮೃತ್ 2.0 ಯೋಜನೆಯಡಿ 37 ಕೋಟಿ ರೂ. ವೆಚ್ಚದ ಸುಧಾರಿತ ಕುಡಿಯುವ ನೀರು ಸರಬರಾಜು ಯೋಜನೆಗೆ ಸಚಿವ ವಿಜಯಾನಂದ ಕಾಶಪ್ಪನವರ ಅವರಿಂದ ಭೂಮಿಪೂಜೆ

✍️ Reporter: Ningappa 🗓 18 Nov 2026, 10:21 PM 👁 37
Share: 💬 WhatsApp 📘 Facebook 𝕏 Post
ಇಲಕಲ್: ಇಲಕಲ್ ನಗರದ ಜನತೆಗೆ ನಿರಂತರ ಹಾಗೂ ಸಮರ್ಪಕ ಕುಡಿಯುವ ನೀರು ಒದಗಿಸುವ ಸಂಕಲ್ಪದೊಂದಿಗೆ, ಅಮೃತ್ 2.0 ಯೋಜನೆಯಡಿ 37 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸುಧಾರಿತ ಕುಡಿಯುವ ನೀರು ಸರಬರಾಜು ಯೋಜನೆಗೆ ಸಚಿವ ವಿಜಯಾನಂದ ಕಾಶಪ್ಪನವರು ಭೂಮಿಪೂಜೆ ನೆರವೇರಿಸಿದರು.

ಹುನಗುಂದ ಮತಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಕ್ಷೇತ್ರದ ಜನರ ಮೂಲಭೂತ ಅಗತ್ಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಇಲಕಲ್ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ನಮ್ಮ ಬದ್ಧತೆಯಾಗಿದೆ.

ನಮ್ಮ ಕುಟುಂಬ ಸದಾ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ, ಅಭಿವೃದ್ಧಿಯ ಪಥದಲ್ಲಿ ಹುನಗುಂದ ಮತಕ್ಷೇತ್ರವನ್ನು ಮುನ್ನಡೆಸುವ ನನ್ನ ಪ್ರಯತ್ನ ನಿರಂತರವಾಗಿರಲಿದೆ.

ಈ ಯೋಜನೆಯ ಅನುಷ್ಠಾನದಿಂದ ಇಲಕಲ್ ನಗರದ ಜನತೆಗೆ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಲಭ್ಯವಾಗುವ ವಿಶ್ವಾಸವಿದೆ ಎಂದರು.
📲Get App