🔥 TRENDING Jharkhand Police Portal Crash Forces R... 92-Year-Old Woman Escapes Nursing Home... TPCC chief accuses BRS of betraying Te... Morning haze lingers in Hyderabad as r... New predatory aquatic insect species i... Cyclone Akvan Forces Cancellation of 4...
20 Nov 2026•
ગુજરાતી मराठी ਪੰਜਾਬੀ বাংলা

ನಾರಾಯಣಪುರ ಬಲದಂಡೆ ಕಾಲುವೆಗೆ ನಿರಂತರ ನೀರು ಹರಿಸಲು ಆಗ್ರಹಿಸಿ ಪಾದಯಾತ್ರೆ: ಜಾಲಹಳ್ಳಿಯಲ್ಲಿ ಅದ್ದೂರಿ ಸ್ವಾಗತಮೂರನೇ ದಿನಕ್ಕೆ ಕಾಲಿಟ್ಟ ಗಬ್ಬೂರಿನಿಂದ ಆರಂಭವಾದ ಪಾದಯಾತ್ರೆ; ನ.20ರಂದು ನಾರಾಯಣಪುರ ಜಲಾಶಯ ಮುತ್ತಿಗೆ ಹೋರಾಟಕ್ಕೆ ರೈತ ಸಂಘಟನೆಗಳಕರೆ

✍️ Reporter: Khaja Hussain 🗓 17 Nov 2026, 09:35 PM 👁 35
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ನಾರಾಯಣಪುರ ಬಲದಂಡೆ ಕಾಲುವೆಗೆ ನಿರಂತರ ನೀರು ಹರಿಸಲು ಆಗ್ರಹಿಸಿ ಪಾದಯಾತ್ರೆ: ಜಾಲಹಳ್ಳಿಯಲ್ಲಿ ಅದ್ದೂರಿ ಸ್ವಾಗತ

### ಮೂರನೇ ದಿನಕ್ಕೆ ಕಾಲಿಟ್ಟ ಗಬ್ಬೂರಿನಿಂದ ಆರಂಭವಾದ ಪಾದಯಾತ್ರೆ; ನ.20ರಂದು ನಾರಾಯಣಪುರ ಜಲಾಶಯ ಮುತ್ತಿಗೆ ಹೋರಾಟಕ್ಕೆ ರೈತ ಸಂಘಟನೆಗಳ ಕರೆ

**ಜಾಲಹಳ್ಳಿ, ನ.17:** ನಾರಾಯಣಪುರ ಬಲದಂಡೆ ಕಾಲುವೆಗೆ ಡಿಸೆಂಬರ್ ಅಂತ್ಯದವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಅಭಿವೃದ್ಧಿ ಸಂಘಟನೆಯ ಬೆಂಗಳೂರು ರಾಜ್ಯಾಧ್ಯಕ್ಷ ಮಾಸ್ತಾನ್ ನಾಯಕ ಅವರ ನೇತೃತ್ವದಲ್ಲಿ ನ.15ರಂದು ಗಬ್ಬೂರಿನಿಂದ ಆರಂಭವಾದ ಪಾದಯಾತ್ರೆ ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿತು.

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಪಾದಯಾತ್ರೆ ತಲುಪುತ್ತಿದ್ದಂತೆ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ರೈತ ಹೋರಾಟಗಾರರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಮಾಸ್ತಾನ್ ನಾಯಕ, ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಜನಪ್ರತಿನಿಧಿಗಳು ಅವರ ಸಮಸ್ಯೆಗಳ ಬಗ್ಗೆ ಸೂಕ್ತ ಕಾಳಜಿ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು, ಸಂಸದರು ಹಾಗೂ ಮಾಜಿ ಜನಪ್ರತಿನಿಧಿಗಳು ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಹೀಗಾಗಿ ರೈತರು ಎಚ್ಚೆತ್ತುಕೊಂಡು ಪಕ್ಷಭೇದ ಮರೆತು ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಎಂ.ಬಿ. ಪಾಟೀಲ್ ಅವರು 12 ಟಿಎಂಸಿ ಹಾಗೂ ಕಾಶಪ್ಪನವರು 7 ಟಿಎಂಸಿ ನೀರನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ವಿವಿಧ ಪಕ್ಷಗಳ ಜನಪ್ರತಿನಿಧಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಯಾರೊಬ್ಬರೂ ಪಾದಯಾತ್ರೆಯಲ್ಲಿ ಭಾಗವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಾಕ್ಸ್ ನಲ್ಲಿ

ನಮ್ಮ ಕ್ಷೇತ್ರದ ಶಾಸಕಿ ಕರೆಮ್ಮ ಜಿ. ನಾಯಕ ಅವರು ಪಾದಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ರಸ್ತೆಬದಿಯಲ್ಲಿದ್ದರೂ ಹೋರಾಟಗಾರರನ್ನು ಮಾತನಾಡಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ, ಅವರ ಕಾರ್ಯಕರ್ತರು ಪಾದಯಾತ್ರೆಗೆ ಅಡ್ಡಿಪಡಿಸಲು ಮುಂದಾಗಿದ್ದರು ಎಂದು ಮಾಸ್ತಾನ್ ನಾಯಕ ಆರೋಪಿಸಿದರು.

ಬಾಕ್ಸ್

ಮುಖಂಡರಾದ ಚಂದಪ್ಪ ಬುದ್ಧಿನ್ನಿ ಮಾತನಾಡಿ, ರೈತ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೆ, ಇಂದು ರೈತರು ಸಂಕಷ್ಟಕ್ಕೆ ಸಿಲುಕಿ ವಿಷ ಕುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲುವೆಗೆ ನಿರಂತರ ನೀರು ಹರಿಸುವಂತೆ ಹಲವು ಸಂಘಟನೆಗಳು ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾವೇರಿ ನೀರಿನ ಹೋರಾಟ ಹಾಗೂ ಕಬ್ಬು ಬೆಳೆಗಾರರ ಹೋರಾಟಗಳಿಂದ ನಮ್ಮ ಭಾಗದ ರೈತರು ಪಾಠ ಕಲಿಯಬೇಕು. ರೈತರು ಪಕ್ಷಭೇದ ಮರೆತು ಒಗ್ಗಟ್ಟಾಗಬೇಕು. ಇದೇ ನ.20ರಂದು ನಡೆಯಲಿರುವ ನಾರಾಯಣಪುರ ಜಲಾಶಯ ಮುತ್ತಿಗೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಬಾಕ್ಸ್ ನಲ್ಲಿ

ಪ್ರಗತಿಪರ ಚಿಂತಕ ರಂಗಣ್ಣ ಕೋಲ್ಕಾರ್ ಮಾತನಾಡಿ, ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲದಿರುವುದು ದುರಂತದ ಸಂಗತಿ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ರಾಜಕಾರಣಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.

ಬಾಕ್ಸ್ ನಲ್ಲಿ

ಕಾರ್ಮಿಕ ಸಂಘಟನೆಯ ಮುಖಂಡ ಶಬ್ಬೀರ್ ಜಾಲಹಳ್ಳಿ ಮಾತನಾಡಿ, ರೈತರು ಮತ್ತು ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟ ನಡೆಸಿದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ. ಜನಪ್ರತಿನಿಧಿಗಳು ಜನರಿಂದಲೇ ಅಧಿಕಾರಕ್ಕೆ ಬರುತ್ತಾರೆ. ಆದ್ದರಿಂದ ಜನರು ಮೊದಲು ಒಗ್ಗಟ್ಟಾಗಬೇಕು. ಪಾದಯಾತ್ರೆ ಯಶಸ್ವಿಯಾಗಿ ರೈತರ ಬೇಡಿಕೆಗಳು ಈಡೇರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಂಗಣ್ಣ ಕೋಲ್ಕಾರ್, ಚಂದಪ್ಪ ಬುದ್ಧಿನ್ನಿ, ಭೀಮಣ್ಣ ವಿರಗೋಟ್, ಶಬ್ಬೀರ್ ಜಾಲಹಳ್ಳಿ, ಮೌನೇಶ್ ಜಾಲಹಳ್ಳಿ, ಬಸವರಾಜ್ ವಂದಲಿ, ರಿಯಾಜ್ ಆರ್ತಿ, ರಾಜು ನಾಯಕ, ಕೊಂಡಯ್ಯ, ಹನುಮಂತ, ಮಲ್ಲು, ಬಸವರಾಜ್ ಗೋಪಾಲಪುರ, ಭೀಮನಗೌಡ ಪಾಟೀಲ್, ಮಹಾದೇವ ಯಾದವ್ ಸೇರಿದಂತೆ ಜಾಲಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಬಾಕ್ಸ್ ನಲ್ಲಿ

ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಪಾದಯಾತ್ರೆಯ ನೇತೃತ್ವ ವಹಿಸಿರುವ ರೈತ ಸಂಘದ ರಾಜ್ಯಾಧ್ಯಕ್ಷ ಮಾಸ್ತಾನ್ ನಾಯಕ ಅವರನ್ನು ಸನ್ಮಾನಿಸಿದರು. ಕರವೇ ಮುಖಂಡರಾದ ನಂದಪ್ಪ ಪಿ. ಮಡ್ಡಿ, ತಮ್ಮಣ್ಣ ಹೆರುಂಡಿ, ಮಲ್ಲು ತೆಗ್ಗೆಳ್ಳಿ, ವೆಂಕಟೇಶ್ ಜೇಗಾರ್ಕಲ್, ಬಸವ ಹೆರುಂಡಿ, ರಂಗಪ್ಪ ಬಂಡಿ, ರಾಘು, ಭೀಮಣ್ಣ, ಪರಮಣ್ಣ, ಗಂಗಣ್ಣ, ಹೈದರ್ ಸಾಬ್ ಮುಲ್ಲಾ ಹಾಗೂ ರಾಜ್ ಮೊಹಮ್ಮದ್ ಕಲೆಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App