🔥 ट्रेंडिंग ବାଲିଯାତ୍ରା ପାଇଁ ଟ୍ରାଫିକ୍ କଟକଣା, ନଭେମ୍ବ... ସରକାରୀ ଟଙ୍କାରେ ବଡ଼ ହେରଫେର; ୧.୨୩ କୋଟି ଟ... ସୁଦାମ ହତ୍ୟା ଘଟଣାର ପର୍ଦ୍ଦାଫାସ: ମଙ୍ଗଳସୂତ... ଢେଙ୍କାନାଳ ପୌରପରିଷଦର ଜଣେ କାଉନସିଲର ନିଖୋଜ... କୂଅରୁ ୧୦ମାସର ଶିଶୁପୁତ୍ରର ମୃତଦେହ ମିଳିବା... फिरोजाबाद के मदनपुर ब्लॉक में तालाब पर...
21 नव. 2026•
ગુજરાતી मराठी ਪੰਜਾਬੀ বাংলা

ಕರ್ನಾಟಕದಲ್ಲಿ ನಿಗಮ-ಮಂಡಳಿ ಅಧ್ಯಕ್ಷರ ನೇಮಕಕ್ಕೆ ಹೈಕಮಾಂಡ್ ಅಸ್ತು - ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೊಸ ಜವಾಬ್ದಾರಿ - 18 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ - ಕೆ.ಸಿ. ವೇಣುಗೋಪಾಲ್ ಆದೇಶ

✍️ रिपोर्टर: Ningappa 🗓 21 नव. 2026, 03:14 PM 👁 16
शेयर करें: 💬 WhatsApp 📘 Facebook 𝕏 Post

ಕರ್ನಾಟಕದಲ್ಲಿ ನಿಗಮ-ಮಂಡಳಿ ಅಧ್ಯಕ್ಷರ ನೇಮಕಕ್ಕೆ ಹೈಕಮಾಂಡ್ ಅಸ್ತು - ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೊಸ ಜವಾಬ್ದಾರಿ - 18 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ - ಕೆ.ಸಿ. ವೇಣುಗೋಪಾಲ್ ಆದೇಶ, ಮುಖ್ಯಮಂತ್ರಿಗಳಿಗೆ ಪತ್ರ - ಬಸನಗೌಡ ದದ್ದಲ್‌ಗೆ ಕೆಕೆಆರ್‌ಡಿಬಿ, ಬೇಲೂರು ಗೋಪಾಲಕೃಷ್ಣಗೆ ಮುಖ್ಯ ಸಚೇತಕ, ತನ್ವೀರ್ ಸೇಠ್‌ಗೆ ಸಿಎಂ ರಾಜಕೀಯ ಕಾರ್ಯದರ್ಶಿ

ಕರ್ನಾಟಕದಲ್ಲಿ ನಿಗಮ-ಮಂಡಳಿ ಅಧ್ಯಕ್ಷರ ನೇಮಕಕ್ಕೆ ಹೈಕಮಾಂಡ್ ಅಸ್ತು - ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೊಸ ಜವಾಬ್ದಾರಿ

ಬೆಂಗಳೂರು: ರಾಜ್ಯದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಮುಖ ಹುದ್ದೆಗಳಿಗೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನೇಮಕಾತಿ ಆದೇಶ ಹೊರಡಿಸಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಅಧಿಕೃತ ಪತ್ರ ರವಾನಿಸಿದ್ದಾರೆ.

ನೇಮಕಗೊಂಡವರ ಪಟ್ಟಿ ಹೀಗಿದೆ:

1. ಬಿ. ಶಿವಣ್ಣ - ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧ್ಯಕ್ಷರು.
2. ಕೆ. ಷಡಕ್ಷರಿ - ಕರ್ನಾಟಕ ರಾಜ್ಯ ಖನಿಜ ನಿಗಮ (KSMCL) ಅಧ್ಯಕ್ಷರು.
3. ಪಿ.ಎಂ. ಅಶೋಕ್ - ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷರು.
4. ಎ.ಆರ್. ಕೃಷ್ಣಮೂರ್ತಿ - ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅಧ್ಯಕ್ಷರು.
5. ಹಂಪನಗೌಡ ಬಾದರ್ಲಿ - ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷರು.
6. ಡಿ.ಜಿ. ಶಾಂತನ ಗೌಡ - ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಅಧ್ಯಕ್ಷರು.
7. ಜಿ.ಎಚ್. ಶ್ರೀನಿವಾಸ್ - ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷರು.
8. ಮಹಾಂತೇಶ್ ಕೌಜಲಗಿ - ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷರು.
9. ಎಸ್.ಎನ್. ಸುಬ್ಬಾರೆಡ್ಡಿ - ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) ಅಧ್ಯಕ್ಷರು.
10. ಬೇಲೂರು ಗೋಪಾಲಕೃಷ್ಣ - ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರು.
11. ತನ್ವೀರ್ ಸೇಠ್ - ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ.
12. ಎನ್.ಎಚ್. ಕೋನರೆಡ್ಡಿ - ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು.
13. ಬಸನಗೌಡ ದದ್ದಲ್ - ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷರು.
14. ಮಂಜುನಾಥ್ ಭಂಡಾರಿ - ವಿಧಾನ ಪರಿಷತ್ತಿನ ಮುಖ್ಯ ಸಚೇತಕರು.
15. ಅಲ್ಲಂಪ್ರಭು ಪಾಟೀಲ್ - ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (KSSIDC) ಅಧ್ಯಕ್ಷರು.
16. ಶ್ಯಾಮ್ ನಟೇಕರ್ - ಕರ್ನಾಟಕ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷರು.
17. ಎಚ್.ಸಿ. ಲಲಿತ್ ರಾಘವ್ - ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ (KAVIKA) ಅಧ್ಯಕ್ಷರು.
18. ಸುಭಾಷ್ ರಾಥೋಡ್ - ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು.

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಸ್ಥಾನ!

ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯ ನಿರೀಕ್ಷೆಯಲ್ಲಿದ್ದ ಹಲವು ಕಾಂಗ್ರೆಸ್ ನಾಯಕರು ಇದೀಗ ನಿಗಮ-ಮಂಡಳಿಗಳಲ್ಲಿ ಪ್ರಮುಖ ಜವಾಬ್ದಾರಿ ಪಡೆದಿದ್ದಾರೆ. ತನ್ವೀರ್ ಸೇಠ್, ಬೇಲೂರು ಗೋಪಾಲಕೃಷ್ಣ, ಹಂಪನಗೌಡ ಬಾದರ್ಲಿ, ಮಹಾಂತೇಶ್ ಕೌಜಲಗಿ ಹಾಗೂ ಎಸ್.ಎನ್. ಸುಬ್ಬಾರೆಡ್ಡಿ ಸೇರಿದಂತೆ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳು.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ನಾಯಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಪಕ್ಷದ ಹೈಕಮಾಂಡ್ ರಾಜಕೀಯ ಸಮತೋಲನ ಸಾಧಿಸಲು ಮುಂದಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
📲Get App