🔥 TRENDING Himachal Pradesh to levy environmental... 12 killed in two separate road crashes... Uttarakhand Bank Manager and Two Agent... Uttarakhand launches door-to-door vote... Delhi HC orders DDA and Jal Board to p... Delhi records cleanest early winter ye...
20 Nov 2026•
ગુજરાતી मराठी ਪੰਜਾਬੀ বাংলা

ರಾಮದುರ್ಗ ಗ್ರಾ.ಪಂ. ದೇವದುರ್ಗಕ್ಕೆ ಮರು ಸೇರ್ಪಡೆಗೆ ನ.18ರಂದು ರಸ್ತೆ ತಡೆ ಚಳವಳಿಜನಾಭಿಪ್ರಾಯಕ್ಕೆ ವಿರುದ್ಧವಾಗಿ ಅರಕೆರೆ ತಾಲೂಕಿಗೆ ಸೇರ್ಪಡೆ ಆರೋಪ; ಗಬ್ಬೂರು ಹೋಬಳಿಗೆ ಮರು ಸೇರ್ಪಡೆಗೊಳಿಸುವಂತೆ ಗ್ರಾಮಸ್ಥರ ಆಗ್ರಹ

✍️ Reporter: Khaja Hussain 🗓 13 Nov 2026, 05:29 PM 👁 72
Watch on: 📘 Facebook
Share: 💬 WhatsApp 📘 Facebook 𝕏 Post
**ರಾಯಚೂರು ಬ್ರೇಕಿಂಗ್ ನ್ಯೂಸ್**

# ರಾಮದುರ್ಗ ಗ್ರಾ.ಪಂ. ದೇವದುರ್ಗಕ್ಕೆ ಮರು ಸೇರ್ಪಡೆಗೆ ನ.18ರಂದು ರಸ್ತೆ ತಡೆ ಚಳವಳಿ

### ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಅರಕೆರೆ ತಾಲೂಕಿಗೆ ಸೇರ್ಪಡೆ ಆರೋಪ; ಗಬ್ಬೂರು ಹೋಬಳಿಗೆ ಮರು ಸೇರ್ಪಡೆಗೊಳಿಸುವಂತೆ ಗ್ರಾಮಸ್ಥರ ಆಗ್ರಹ

**ರಾಯಚೂರು ನ.13:** ಜನಾಭಿಪ್ರಾಯಕ್ಕೆ ವಿರುದ್ಧವಾಗಿ ದೇವದುರ್ಗ ತಾಲೂಕಿನಿಂದ ಬೇರ್ಪಡಿಸಿ ಅರಕೆರೆ ತಾಲೂಕಿಗೆ ಸೇರ್ಪಡೆಗೊಳಿಸಿರುವ ರಾಮದುರ್ಗ ಗ್ರಾಮ ಪಂಚಾಯಿತಿಯನ್ನು ಮತ್ತೆ ದೇವದುರ್ಗ ತಾಲೂಕು ಹಾಗೂ ಗಬ್ಬೂರು ಹೋಬಳಿಗೆ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿ ನ.18ರಂದು ರಾಮದುರ್ಗ ಕ್ರಾಸ್‌ನಲ್ಲಿ ರಸ್ತೆ ತಡೆ ಚಳವಳಿ ನಡೆಸಲು ರಾಮದುರ್ಗ ಗ್ರಾಮ ಪಂಚಾಯಿತಿ ಹೋರಾಟ ಸಮಿತಿ ನಿರ್ಧರಿಸಿದೆ.

ಈ ಕುರಿತು ಹೋರಾಟ ಸಮಿತಿಯ ಮುಖಂಡರು ನ.12ರಂದು ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಹಿಂದೆ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಗೆ ಒಳಪಟ್ಟಿದ್ದ ರಾಮದುರ್ಗ ಗ್ರಾಮ ಪಂಚಾಯಿತಿ ಹಾಗೂ ಅದರ ವ್ಯಾಪ್ತಿಯ ಕಾಕರಗಲ್, ಸಂಕೇಶ್ವರ ಹಾಳ, ಜಿನ್ನಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನರಿಗೆ ದೇವದುರ್ಗ ಮತ್ತು ಗಬ್ಬೂರು ಹೋಬಳಿ ಕೇಂದ್ರಗಳು ಹತ್ತಿರವಾಗಿದ್ದವು. ಇದರಿಂದ ಸರ್ಕಾರಿ ಕೆಲಸ ಕಾರ್ಯಗಳು, ರೈತಾಪಿ ಚಟುವಟಿಕೆಗಳು ಹಾಗೂ ವ್ಯಾಪಾರ-ವಹಿವಾಟುಗಳಿಗೆ ಅನುಕೂಲವಾಗುತ್ತಿತ್ತು. ಆದರೆ ಸ್ಥಳೀಯ ಜನರ ಅಭಿಪ್ರಾಯ ಪಡೆಯದೆ ಗ್ರಾಮ ಪಂಚಾಯಿತಿಯನ್ನು ನೂತನ ಅರಕೆರೆ ತಾಲೂಕಿಗೆ ಸೇರ್ಪಡೆಗೊಳಿಸಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ.

ಅರಕೆರೆ ತಾಲೂಕು ಕೇಂದ್ರಕ್ಕೆ ತೆರಳಿ ಸರ್ಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಗ್ರಾಮಸ್ಥರು ಹೆಚ್ಚಿನ ಪ್ರಯಾಣದ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ರಾಮದುರ್ಗ ಗ್ರಾಮ ಪಂಚಾಯಿತಿಯನ್ನು ಮತ್ತೆ ದೇವದುರ್ಗ ತಾಲೂಕು ಆಡಳಿತ ವ್ಯಾಪ್ತಿಗೆ ಹಾಗೂ ಗಬ್ಬೂರು ಹೋಬಳಿಗೆ ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

ಈ ಮನವಿಗೆ ಸ್ಪಂದಿಸಿದ್ದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು 2025ರ ಸೆ.26ರಂದು ಪತ್ರ ಹೊರಡಿಸಿ, ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನಾಭಿಪ್ರಾಯ, ತಾಲೂಕು ಕೇಂದ್ರಕ್ಕೆ ಇರುವ ದೂರ, ಸಾರಿಗೆ ಸಂಪರ್ಕ, ಭೌಗೋಳಿಕ ವಿಸ್ತೀರ್ಣ, ಆಡಳಿತಾತ್ಮಕ ಅನುಕೂಲ ಹಾಗೂ ಸಾರ್ವಜನಿಕ ಹಿತದೃಷ್ಟಿಯನ್ನು ಪರಿಗಣಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸುವಂತೆ ರಾಯಚೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಸರ್ಕಾರದ ನಿರ್ದೇಶನ ನೀಡಿ ಸುಮಾರು ಒಂದು ವರ್ಷ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹೋರಾಟ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ನ.18ರಂದು ರಾಮದುರ್ಗ ಕ್ರಾಸ್‌ನಲ್ಲಿ ರಸ್ತೆ ತಡೆ ಚಳವಳಿ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ರಾಮದುರ್ಗ ಗ್ರಾಮ ಪಂಚಾಯಿತಿಯನ್ನು ಗಬ್ಬೂರು ಹೋಬಳಿಗೆ ಮರು ಸೇರ್ಪಡೆಗೊಳಿಸಿ ದೇವದುರ್ಗ ತಾಲೂಕಿನಲ್ಲಿಯೇ ಮುಂದುವರಿಸುವಂತೆ ಆದೇಶ ಹೊರಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

**ಮನವಿ ಸಲ್ಲಿಸಿದ ಮುಖಂಡರು:** ಹನುಮಂತ ಕಾಕರಗಲ್, ಶರಣಗೌಡ ಸಂಕೇಶ್ವರಹಾಳ , ಅಮರಣ್ಣ ಗೌಡ, ವೀರಣ್ಣಗೌಡ ಪೊಲೀಸ್ ಪಾಟೀಲ್, ವೆಂಕಟೇಶ್ ಪಾಟೀಲ್, ಮಲ್ಲಿಕಾರ್ಜುನಗೌಡ ಸಂಕೇಶ್ವರಹಾಳ್ , ಪರಮಾನಂದ ದೇಸಾಯಿ, ಇಸಾಕ್ ಮೇಸ್ತ್ರಿ, ಹನುಮಂತರಾಯ ನಾಯಕ್, ಸಣ್ಣ ವೀರೇಶ್, ಪ್ರಕಾಶ್ ಗೌಡ, ಬೂದೆನಗೌಡ ಸೇರಿದಂತೆ ಹೋರಾಟ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App