🔥 TRENDING Nitesh Tiwari's 'Ramayana' Hits ₹650 c... Haryana postpones final SIR roll to De... Haryana Athlete Who Ran From SAI Locat... CBI Nabs Haryana GST Officer for Rs 10... Pro Hockey League 2026 kicks off today... Punjab National Bank Shares Reach Fres...
20 Nov 2026•
ગુજરાતી मराठी ਪੰਜਾਬੀ বাংলা

ಅನ್ನದಾತ ರೈತರ ಬೆಳೆಗಳಿಗೆ ಜನವರಿ ಕೊನೆಯವರೆಗೆ ನೀರು ಬಿಡಿಸಲು ಒತ್ತಾಯಿಸಿ ನ.16 ರಂದು ರಸ್ತೆ ತಡೆ ಬೃಹತ್ ಹೋರಾಟ ರೂಪುರೇಷೆ ತಯಾರಿ

✍️ Reporter: Ningappa 🗓 13 Nov 2026, 03:39 PM 👁 78
Share: 💬 WhatsApp 📘 Facebook 𝕏 Post

ರೈತರ ಬೆಳೆಗಳಿಗೆ ಜನವರಿ ಕೊನೆಯವರೆಗೆ ನೀರು ಬಿಡಿಸಲು ಒತ್ತಾಯಿಸಿ ರಸ್ತೆ ತಡೆ ಬೃಹತ್ ಹೋರಾಟ - ನ.16-11-2026 ರಂದು ಹೋರಾಟ - ರೈತರ ಬೆಳೆಗಳನ್ನು ಉಳಿಸಿ, ರೈತರ ಬದುಕನ್ನು ಕಾಪಾಡಿ ಎಂದು ಆಗ್ರಹ - ಗೋವಿಂದರಾಜ ನಾಯಕ ನೇತೃತ್ವದಲ್ಲಿ ಹೋರಾಟ

ಅನ್ನದಾತ ರೈತರ ಬೆಳೆಗಳಿಗೆ ಜನವರಿ ಕೊನೆಯವರೆಗೆ ನೀರು ಬಿಡಿಸಲು ಒತ್ತಾಯಿಸಿ ನ.16 ರಂದು ರಸ್ತೆ ತಡೆ ಬೃಹತ್ ಹೋರಾಟ

ರಾಯಚೂರು: "ಅನ್ನದಾತ ದೇವರುಗಳಾದ ರೈತರ ಬೆಳೆಗಳಿಗೆ ಜನವರಿ ಕೊನೆಯವರೆಗೆ ನೀರು ಬಿಡಿಸುವಂತೆ ಒತ್ತಾಯಿಸಿ.ಇದೇ ನ.16ರಂದು ಸಿರವಾರ ಕ್ರಾಸ್ ಬಳಿ ರಸ್ತೆ ತಡೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.

ಇದರ ಭಾಗವಾಗಿ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಶಾಸಕಿ ಪುತ್ರಿ ಕುಮಾರಿ ಗೌರಿ ನೇತೃತ್ವದಲ್ಲಿ ಪ್ರತಿಯೊಂದು ಹಳ್ಳಿಗಳ ರೈತರಿಗೆ ಹೋರಾಟದಲ್ಲಿ ಭಾಗವಹಿಸುವಂತೆ ಮನವರಿಕೆ ಮಾಡಲಾಯಿತು.

ಬುಂಕಲದೊಡ್ಡಿ,ಚಿಂಚೋಡಿ,ಲಿಂಗದಳ್ಳಿ, ಹೊಸೂರು ಸಿದ್ದಾಪುರ, ಬೊಮ್ಮನಳ್ಳಿ, ಸೋಮನಮರಡಿ ಸೇರಿದಂತೆ ಇನ್ನಿತರೆ ಹಳ್ಳಿಗಳಿಗೆ ಜೆಡಿಎಸ್ ಪಕ್ಷದ ವಿವಿಧ ಘಟಕದ ನಾಯಕರು ಭೇಟಿ ನೀಡಿ ಮಾತನಾಡಿದರು. ಪ್ರತಿ ಹಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು.

ಪಕ್ಷದ ತಾಲ್ಲೂಕು ಅಧ್ಯಕ್ಷ ಬಸನಗೌಡ ದೇಸಾಯಿ, ಯುವ ಘಟಕದ ಅಧ್ಯಕ್ಷ ರಮೇಶ್ ರಾಮನಾಳ,ಎಸ್ಟಿ ಮೋರ್ಚಾ ಘಟಕದ ಅಧ್ಯಕ್ಷ ಗೋವಿಂದರಾಜು ತಿಂಪೂರ,ಶಿವನಗೌಡ ನಾಯಕ, ಮಗ್ದುಮ್ ಹುಸೇನ್,ಯಲ್ಲಪ್ಪ ಗಚ್ಚಿನಮನಿ ಸೇರಿದಂತೆ ಇತರರು ಇದ್ದರು.

ಹೋರಾಟದ ಪ್ರಮುಖ ಬೇಡಿಕೆಗಳು:
- ಜನವರಿ ಕೊನೆಯವರೆಗೆ ನೀರು ಬಿಡಿಸಿ
- ರೈತರ ಬೆಳೆಗಳನ್ನು ಉಳಿಸಿ
- ರೈತರ ಬದುಕನ್ನು ಕಾಪಾಡಿ

"ರೈತ ದೋಷಣೆ ನಮ್ಮ ದೋಷಣೆ... ರೈತರ ಹೋರಾಟಕ್ಕೆ ಬೆಂಬಲಿಸಿ..." ಎಂದು ಕರೆ ನೀಡಲಾಗಿದೆ.
📲Get App