🔥 TRENDING Shillong Teer Results Released for 19... Meghalaya CM Promises Baljek Airport D... Meghalaya Signs MoU with AAI to Launch... Theft Spree in Mubarakpur and Meerpur... Cold Weather Sparks Breathing Trouble... Services Set to Face Nagaland in 19 No...
20 Nov 2026•
ગુજરાતી मराठी ਪੰਜਾਬੀ বাংলা

ಸೋಮಲಾಪುರದಲ್ಲಿ ಕೂಲಿಕಾರರ ಘೋಷಣೆ - ಕುಡಿಯುವ ನೀರು ಕೊಡಲೇಬೇಕು, 125 ದಿನ ಕೆಲಸ ಕೊಡಲೇಬೇಕು, 382 ರೂ. ಕೂಲಿ ಹಾಕಲೇಬೇಕು - ಹಕ್ಕು ಪತ್ರ, ಬೀದಿ ದೀಪಕ್ಕೆ ಒತ್ತಾಯ - ಸಮಸ್ಯೆ ಬಗೆಹರಿಸದಿದ್ದರೆ ಪಂಚಾಯತಿ ಮುತ್ತಿಗೆ ಎಚ್ಚರಿಕೆ

✍️ Reporter: Ningappa 🗓 15 Nov 2026, 02:50 PM 👁 52
Share: 💬 WhatsApp 📘 Facebook 𝕏 Post

ಸಿಂಧನೂರು ತಾಲೂಕಿನ ಸೋಮಲಾಪುರದಲ್ಲಿ ಕೂಲಿಕಾರರ ಹೋರಾಟದ ಕೂಗು - 1ನೇ, 2ನೇ ವಾರ್ಡ್‌ಗೆ ನಿರಂತರ ಕುಡಿಯುವ ನೀರು, ಬೀದಿ ದೀಪ, ಗುಡಿಸಲು ಹಾಕಿಕೊಂಡವರಿಗೆ ಹಕ್ಕು ಪತ್ರಕ್ಕೆ ಒತ್ತಾಯ - ಉದ್ಯೋಗ ಖಾತ್ರಿಯಲ್ಲಿ 125 ದಿನ ಕೆಲಸ, 382 ರೂ. ಕೂಲಿಗೆ ಆಗ್ರಹ - ಮಂಗಳವಾರ ಪಂಚಾಯತಿ ಮುಂದೆ ಹೋರಾಟ

ಸೋಮಲಾಪುರದಲ್ಲಿ ಕೂಲಿಕಾರರ ಘೋಷಣೆ - ಕುಡಿಯುವ ನೀರು ಕೊಡಲೇಬೇಕು, 125 ದಿನ ಕೆಲಸ ಕೊಡಲೇಬೇಕು

ಸಿಂಧನೂರು: ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಕೂಲಿಕಾರರ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧ್ವನಿ ಎತ್ತಿದರು.

ಗ್ರಾಮಸ್ಥರ ಪರವಾಗಿ ಮಾತನಾಡಿದ ಮುಖಂಡರು, ಗ್ರಾಮದ ಎಲ್ಲರ ಸಂಘಟನೆಯ ಮುಖಾಂತರ ಈ ಸಮಸ್ಯೆಗಳನ್ನು ಎಲ್ಲರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಪಂಚಾಯತಿ ಮುತ್ತಿಗೆ ಕಾರ್ಯಕ್ರಮವನ್ನು ಹಾಕಿಕೊಳ್ಳುತ್ತೇವೆ. ಆದಷ್ಟು ಬೇಗ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಸೋಮಲಾಪುರ ಗ್ರಾಮದ 1ನೇ ವಾರ್ಡ್ ಹಾಗೂ 2ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ನಿರಂತರವಾಗಿ ಆಗಬೇಕು. ಕಂಬಗಳಿಗೆ ಬೀದಿ ದೀಪ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಬಹಳ ಲೇಟ್ ಮಾಡುತ್ತಾರೆ. 125 ದಿವಸ ಕೆಲಸ ಕೊಡುವುದರ ಬದಲು ವರ್ಷಕ್ಕೆ ಸುಮಾರು 30-40 ದಿವಸ ಮಾತ್ರ ಕೊಟ್ಟು ಸರಿ ಮಾಡುತ್ತಾರೆ. 125 ದಿವಸ ಕೆಲಸ ಕೊಡಲೇಬೇಕು. 382 ರೂಪಾಯಿ ಕೂಲಿಯನ್ನು ಹಾಕಲೇಬೇಕು. ಬರಿ 200-300 ರೂಪಾಯಿ ಒಳಗೆ ಹಾಕುತ್ತಿದ್ದಾರೆ. ಇದನ್ನು ಮೇಲಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ವ್ಯವಸ್ಥೆ ಸರಿಪಡಿಸಬೇಕು ಎಂದು ವಿನಂತಿ ಮಾಡಿದರು.

ಸೋಮಲಾಪುರ ಗ್ರಾಮದಲ್ಲಿ ಗುಡಿಸಲು ಹಾಕಿಕೊಂಡ ಬಡವರಿಗೆ ಹಕ್ಕು ಪತ್ರ ಕೊಡಲೇಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು, ಕುಡಿಯುವ ನೀರಿನ ವ್ಯವಸ್ಥೆ ಆಗಲೇಬೇಕು, ಉದ್ಯೋಗ ಖಾತ್ರಿ ಯೋಜನೆಯಲ್ಲಿ 125 ದಿನಗಳ ಕೆಲಸ ಕೊಡಲೇಬೇಕು, ಹಕ್ಕು ಪತ್ರ ಕೊಡಲೇಬೇಕು, ಕಂಬಕ್ಕೆ ಬೀದಿ ದೀಪ ಆಗಲೇಬೇಕು, ಕೂಲಿಕಾರರ ಸಂಘಟನೆಯ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಘೋಷಣೆ ಕೂಗಿದರು.

ಪಂಚಾಯತಿ ಮುಂದೆ ನಡೆಯುವ ಮಂಗಳವಾರದ ಹೋರಾಟಕ್ಕೆ ಜಯವಾಗಲಿ, ಏನೇ ಬರಲಿ ಒಗ್ಗಟ್ಟಿರಲಿ ಎಂದು ಘೋಷಣೆ ಕೂಗಿ ಹೋರಾಟಕ್ಕೆ ಕರೆ ನೀಡಿದರು.
📲Get App