🔥 TRENDING West Bengal CM Mamata Banerjee meets A... ଓଡ଼ିଶାର ଡିଜିପି ବିନୟତୋଷ ମିଶ୍ରଙ୍କ କାର୍ଯ୍... Tejashwi Yadav Calls for Bridge Naming... ପୁରୀ ଶ୍ରୀମନ୍ଦିର ଯାତ୍ରୀଙ୍କ ପାଇଁ ପାଣିପାଗ... U.S. Loses Measles Elimination Status... Bihar Government Targets 10% Share in...
20 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಗ್ರಾ.ಪಂ. ಸಿಬ್ಬಂದಿಯ 12 ತಿಂಗಳ ಬಾಕಿ ವೇತನ ಪಾವತಿಗೆ 20 ದಿನಗಳ ಭರವಸೆ

✍️ Reporter: Khaja Hussain 🗓 12 Nov 2026, 08:15 PM 👁 59
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿ ಗ್ರಾ.ಪಂ. ಸಿಬ್ಬಂದಿಯ 12 ತಿಂಗಳ ಬಾಕಿ ವೇತನ ಪಾವತಿಗೆ 20 ದಿನಗಳ ಭರವಸೆ

### ನೌಕರರ ಸಂಘದ ಧರಣಿ ಸತ್ಯಾಗ್ರಹಕ್ಕೆ ಗ್ರಾಮಸ್ಥರು, ಗ್ರಾ.ಪಂ. ಸದಸ್ಯರ ಬೆಂಬಲ; ಪಿಡಿಒ ಅವರಿಂದ ಲಿಖಿತ ಭರವಸೆ

**ಜಾಲಹಳ್ಳಿ, ನ.12:** ಜಾಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 29 ಸಿಬ್ಬಂದಿಗೆ ಕಳೆದ 12 ತಿಂಗಳಿನಿಂದ ಬಾಕಿ ಉಳಿದಿರುವ ವೇತನ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (CITU) ವತಿಯಿಂದ ಗುರುವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಧರಣಿಗೆ ಜಾಲಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿ ಬೆಂಬಲ ಸೂಚಿಸಿದ್ದು, ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಹೋರಾಟಕ್ಕೆ ಕೈಜೋಡಿಸಿದರು. ನೌಕರರ ಸಂಘದ ಹೋರಾಟಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಆಡಳಿತ, ಸಿಬ್ಬಂದಿಗಳ ಸಮಸ್ಯೆ ಪರಿಹರಿಸುವ ಭರವಸೆ ನೀಡಿದೆ.

ಸಿಬ್ಬಂದಿಗಳ ಬಾಕಿ ವೇತನ ಹಾಗೂ ಅನುದಾನ ಬಿಡುಗಡೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಂದಿನ 20 ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತ ಭರವಸೆ ನೀಡಿದ್ದಾರೆ.

ನವೆಂಬರ್ 12ರಂದು ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ನೌಕರರ ಸಂಘಕ್ಕೆ ನೀಡಿದ ಅಧಿಕೃತ ಪತ್ರದಲ್ಲಿ 29 ಸಿಬ್ಬಂದಿಯ 12 ತಿಂಗಳ ಬಾಕಿ ವೇತನ ಹಾಗೂ ಅನುದಾನಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಉಲ್ಲೇಖಿಸಲಾಗಿದೆ.

ಸಿಬ್ಬಂದಿಗಳಿಗೆ ಬಾಕಿ ವೇತನ ಪಾವತಿಸುವುದು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ವೇತನ ಅನುದಾನ ಬಿಡುಗಡೆ, ತುಟ್ಟಿಭತ್ಯೆ ನೀಡುವುದು, ಸ್ವಚ್ಛತಾ ಸಿಬ್ಬಂದಿಗೆ ಸುರಕ್ಷತಾ ಪರಿಕರಗಳನ್ನು ಒದಗಿಸುವುದು ಹಾಗೂ ನೀರು ಪಂಪ್ ಸಿಬ್ಬಂದಿಗೆ ಅಗತ್ಯ ಭತ್ಯೆ ಮತ್ತು ಸಲಕರಣೆಗಳನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಂಘ ಮುಂದಿಟ್ಟಿದೆ.

ಈ ಹಿಂದೆ ಬೇಡಿಕೆಗಳನ್ನು ಈಡೇರಿಸದಿದ್ದರೆ ನವೆಂಬರ್ 12ರಿಂದ ಕೆಲಸ ಸ್ಥಗಿತಗೊಳಿಸಿ ನಿರಂತರ ಧರಣಿ ನಡೆಸುವುದಾಗಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದರು. ಇದೀಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 20 ದಿನಗಳೊಳಗೆ ಸಮಸ್ಯೆ ಪರಿಹರಿಸುವುದಾಗಿ ಲಿಖಿತ ಭರವಸೆ ನೀಡಿರುವುದರಿಂದ ಸಿಬ್ಬಂದಿಯಲ್ಲಿ ನಿರೀಕ್ಷೆ ಮೂಡಿದೆ.

ಈ ಸಂದರ್ಭದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ವೆಂಕೋಬ, ಕಾರ್ಯದರ್ಶಿ ಕಾಶಿಲಿಂಗ, ಜಿಲ್ಲಾ CITU ಮುಖಂಡರಾದ ಗಿರಿಯಪ್ಪ ಪೂಜಾರಿ, ರಾಯಪ್ಪ, ಮುದರಂಗಪ್ಪ, ಸೋಹೇಲ್ ಸೇರಿದಂತೆ ಮಹಿಳಾ ಸಿಬ್ಬಂದಿ ಉಪಸ್ಥಿತರಿದ್ದರು.

ಧರಣಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ವೈಶಾಲಿ ಜಳಕಿ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App